ಮುಂಡರಗಿ: ಪಟ್ಟಣವು ಸೇರಿದಂತೆ ತಾಲ್ಲೂಕಿನ ವಿವಿಧ ಪೆಟ್ರೋಲ್ ಬಂಕ್ಗಳಲ್ಲಿ ಕಳೆದ 3–4 ದಿನಗಳಿಂದ ಡಿಸೇಲ್ ಕೊರತೆ ಉಂಟಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಡೀಸೆಲ್ ದೊರೆಯದೆ ರೈತರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ.

ಪಟ್ಟಣದ ಹೇಮಂತಗೌಡ ಪಾಟೀಲ ಅವರ ಪೆಟ್ರೋಲ್ ಬಂಕ್ ಅಲ್ಲಿ ಮಾತ್ರ ಗುರುವಾರ ಡಿಸೇಲ್ ಲಭ್ಯವಿದ್ದು, ಅದನ್ನು ಪಡೆದುಕೊಳ್ಳಲು ವಾಹನ ಸವಾರರು ಮುಗಿಬಿದ್ದರು. ಬಂಕ್ ಅಲ್ಲಿ ಪೆಟ್ರೋಲ್ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ಗ್ರಾಹಕರು ಕೇಳಿದಷ್ಟು ಪೆಟ್ರೋಲ್ ದೊರೆಯುತ್ತಲಿದೆ. ಆದರೆ ಡೀಸೆಲ್ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ.

ಇದೀಗ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಗಾಗಿ ತಮ್ಮ ಜಮೀನನ್ನು ಹದಗೊಳಿಸಬೇಕಾಗಿದೆ. ಬಹುತೇಕ ರೈತರು ಜಮೀನು ಉಳುಮೆ, ಒಕ್ಕಲು, ಸಾಗಾಣಿಕೆ ಮೊದಲಾದವುಗಳಿಗೆ ಟ್ರ್ಯಾಕ್ಟರ್ ಅವಲಂಬಿಸಿದ್ದು, ಅಗತ್ಯಕ್ಕೆ ತಕ್ಕಷ್ಟು ಇಂಧನ ದೊರೆಯದೆ ಪರದಾಡುವಂತಾಗಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.

ಭತ್ತ ಕೊಯ್ಯುವ ಯಂತ್ರಕ್ಕೆ ಹಾಗೂ ಭತ್ತ ನಾಟಿ ಮಾಡುವ ಯಂತ್ರಕ್ಕೆ ತಕ್ಕಷ್ಟು ಡಿಸೇಲ್ ದೊರೆಯದಿರುವುದರಿಂದ ಭತ್ತದ ಒಕ್ಕಲಿಗೆ ಹಿನ್ನಡೆಯಾಗಿದೆ ಎಂದು ರೈತರು ತಿಳಿಸಿದರು.

ಪೆಟ್ರೋಲ್ ಬಂಕ್ ಮಾಲೀಕರು ಬಂಕ್ ಬಳಿ ಬರುವ ವಾಹನಗಳಿಗೆ ಮಾತ್ರ ಇಂಧನ ತುಂಬಬೇಕು. ಕ್ಯಾನ್, ಬ್ಯಾರಲ್ ಹಾಗೂ ಮತ್ತಿತರ ಕಂಟೇನರ್ಗಳಿಗೆ ಇಂಧನ ತುಂಬಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪಟ್ಟಣದಿಂದ 20-30 ಕಿಮೀ ದೂರದ ಗ್ರಾಮಗಳಲ್ಲಿರುವ ರೈತರು ಡೀಸೆಲ್ ಪಡೆದುಕೊಳ್ಳಲು ದೊಡ್ಡ ಕ್ಯಾನ್ ತೆಗೆದುಕೊಂಡು ಬರುತ್ತಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಅವರಿಗೆ ಡೀಸೆಲ್ ನೀಡಲಾರದಂತಹ ಅಸಹಾಯಕ ಪರಸ್ಥಿತಿ ನಿರ್ಮಾಣವಾಗಿದೆ. ಏಕಕಾಲದಲ್ಲಿ ಸರ್ಕಾರದ ಆದೇಶ ಪಾಲೀಸುವುದು ಹಾಗೂ ರೈತರ ಹಿತ ಕಾಪಾಡುವುದು ಪೆಟ್ರೋಲ್ ಬಂಕ್ ಮಾಲೀಕರಿಗೆ ಅಸಾಧ್ಯವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಂಕ್ ಮಾಲೀಕರೊಬ್ಬರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-23-1781859670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.