ಮುನಿರಾಬಾದ್: ಗದಗ ಜಿಲ್ಲೆ ಬಳಗಾನೂರು ಮಠದ ಚಿಕ್ಕೇನಕೊಪ್ಪ ಚನ್ನವೀರ ಶರಣರ 31ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಸಮೀಪದ ಬೇವಿನಹಳ್ಳಿಯಲ್ಲಿ ಬುಧವಾರ ವಿವಿಧ ಕಾರ್ಯಕ್ರಮಗಳು ಜರುಗಿದವು.

ಮಠದ ಭಕ್ತ ಬಸನಗೌಡ ಪಾಟೀಲ ಅವರ ತೋಟದಲ್ಲಿ ಬಳಗಾನೂರು ಮಠದ ಶಿವ ಶಾಂತವೀರ ಶರಣರ 641ನೇ ಹಾಗೂ ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರ 76ನೇ ‘ನಾಣ್ಯ ತುಲಾಭಾರ’ ಕಾರ್ಯಕ್ರಮ ನಡೆಯಿತು.

ಐದು ಜೋಡಿ ಸಾಮೂಹಿಕ ಮದುವೆ, ಸಾಧಕರಿಗೆ ‘ಶರಣ ಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಾನ್ನಿಧ್ಯವಹಿಸಿದ್ದ ಬಳಗಾನೂರು ಮಠದ ಶಿವಶಾಂತವೀರ ಶರಣರು ಮಾತನಾಡಿ,‘ಕಾಯಕ ತತ್ವದ ಅಡಿ ವ್ಯಾಪಾರ ಮಾಡುವ ಬಸನಗೌಡ ಪಾಟೀಲ ಅವರು ದುಡಿದ ಹಣದಲ್ಲಿ ಒಂದಿಷ್ಟು ಸಮಾಜಮುಖಿ ಕಾರ್ಯಕ್ಕೆ ಖರ್ಚು ಮಾಡುತ್ತಾರೆ. ಇದು ಇನ್ನೊಬ್ಬರಿಗೆ ಮಾದರಿಯಾಗಿದೆ’ ಎಂದರು.

ಫಕೀರಯ್ಯ ಸ್ವಾಮಿ ಮತ್ತು ಬಸಣ್ಣ ಪಟ್ಟೇದ ದಂಪತಿಗಳು ತುಲಾಭಾರ ನೆರವೇರಿಸಿದರು. ಸೋಮಶೇಖರ ಹರ್ತಿ ಮತ್ತು ಶಿವನಗೌಡ ಪಾಟೀಲ್ ಇಬ್ಬರು ನಿವೃತ್ತ ಶಿಕ್ಷಕರಿಗೆ ‘ಗುರುವಂದನೆ’ ಕಾರ್ಯಕ್ರಮ ನಡೆಯಿತು.

ರಾಮಚಂದ್ರ ಶೆಟ್ಟಿ, ಕೆ.ಎಂ. ಹಾಲಪ್ಪ, ಜಿ.ಲಿಂಗನಗೌಡ ಮೂವರಿಗೆ ‘ಶರಣ ಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿದರು. ಹೂವಿನಹಡಗಲಿಯ ಗವಿಮಠ ಶಾಖಾ ಮಠದ ಹಿರಿಶಾಂತವೀರ ಸ್ವಾಮೀಜಿ, ಶ್ರೀಶೈಲ ಶಾಖಾ ಮಠದ ನಾಗಭೂಷಣ ದೇಶಿಕರು ಉಪಸ್ಥಿತರಿದ್ದರು.

ಹೃದಯ ಸ್ಪರ್ಶಿ ಸಮಾರಂಭ: ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದಿಂದ ಬಂದ 12 ಜನ ಶತಾಯುಷಿ ಮಹಿಳೆಯರಿಗೆ ಆತ್ಮೀಯವಾಗಿ ಸನ್ಮಾನಿಸಿ, ಬಟ್ಟೆ ಉಡುಗೊರೆ ನೀಡಲಾಯಿತು. ಶಿವಲಿಂಗಯ್ಯ ಶಾಸ್ತ್ರಿ ನಿರೂಪಿಸಿ ವಂದಿಸಿದರು. ಕಾಶಯ್ಯ ಸ್ವಾಮಿ, ಅಮರೇಗೌಡ ಪಾಟೀಲ್, ಸೋಮಲಿಂಗಪ್ಪ ಕಾಮನೂರು, ಗಣ್ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಜನ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-35-108819113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.