ಮುಂಡರಗಿ: ನಮ್ಮೂರ ದಸಾರಾಕ್ಕೆ ಅನ್ನದಾನೀಶ್ವರ ಶ್ರೀ ಚಾಲನೆ

7

ಮುಂಡರಗಿ: ನಮ್ಮೂರ ದಸಾರಾಕ್ಕೆ ಅನ್ನದಾನೀಶ್ವರ ಶ್ರೀ ಚಾಲನೆ

Published:
Updated:
Deccan Herald

ಮುಂಡರಗಿ: ‘ನಮ್ಮ ದೇಹ ಹಾಗೂ ಮನಸ್ಸಿನಲ್ಲಿ ಅಡಗಿರುವ ದುಷ್ಟ ಗುಣಗಳನ್ನು ಸಂಹಾರ ಮಾಡುವ ಮೂಲಕದುರ್ಗಾಪೂಜೆ ಹಾಗೂ ನವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು’ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜವು ಬುಧವಾರ ರಾತ್ರಿ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ನಮ್ಮೂರ ದಸರಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳು ನಮ್ಮ ದೇಹ ಮತ್ತು ಮನಸ್ಸು ಆಕ್ರಮಿಸಿಕೊಂಡಿವೆ. ಅವುಗಳನ್ನು ನಿಯಂತ್ರಿಸಬೇಕಾಗಿದೆ. ಮನುಷ್ಯ ಸದಾ ಸತ್ಕಾರ್ಯದಲ್ಲಿ ತೊಡಗಿಕೊಂಡು ತನ್ನನ್ನು ತಾನು ಅರಿತುಕೊಂಡಾಗ ಮಾತ್ರ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಪ್ರವಚನಕಾರ ಡಾ.ಎಂ.ಬಿ.ಬೆಳವಟಗಿಮಠ ಮಾತನಾಡಿ, ‘ಮನುಷ್ಯ ನೈಜತೆ ಮರೆತು ಕೃತಕ ಜೀವನಕ್ಕೆ ಅಂಟಿಕೊಂಡಿದ್ದಾನೆ.ಸಹಜವಾದ ಉತ್ತಮ ಗುಣಗಳನ್ನು ಮರೆತು ಬದುಕತೊಡಗಿದ್ದಾನೆ. ನಗು ಇಂದು ನಮ್ಮಿಂದ ಮಾಯವಾಗುತ್ತಿದ್ದು, ನಾವೆಲ್ಲ ಒತ್ತಡದ ಜೀವನ ನಡೆಸುತ್ತಿದ್ದೇವೆ’ ಎಂದರು.

ಚನ್ನವೀರಯ್ಯ ಹಿರೇಮಠ ಹಾಗೂ ಮಹಾಲಿಂಗಸ್ವಾಮಿ ಹಿರೇಮಠ ಸಂಗೀತ ಸೇವೆ ನೀಡಿದರು. ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಅಧ್ಯಕ್ಷ ಅಶೋಕ ಸಿದ್ಧಲಿಂಗ ಅಧ್ಯಕ್ಷತೆ ವಹಿಸಿದ್ದರು.

ಬಿ.ಟಿ.ಹಾದಿಮನಿ, ಡಿ.ಜಿ.ಮಗಜಿ, ರಮೇಶ ಪವಾರ, ಗಣೇಶ ಮಗಜಿ, ರಾಘು ಹಾದಿಮನಿ, ವಿಜಯಬಸವ, ಶಂಕರ ಮಗಜಿ, ಕಾಶೀನಾಥ ಕಲಬುರ್ಗಿ, ವೆಂಕಟೇಶ ಬಾಕಳೆ, ಶ್ರೀನಿವಾಸ, ಎಸ್.ಆರ್.ಬಸಾಪೂರ, ಸೀತಾ ಬಸಾಪೂರ, ಗಣೇಶ ಕಬಾಡಿ, ಸುನಂದಾಬಾಯಿ ಮಗಜಿ, ಕೌಶಲ್ಯಾಬಾಯಿ ಸಿದ್ಧಲಿಂಗ, ರೇಣುಕಾ ಹಾದಿಮನಿ, ವಿದ್ಯಾ ಪವಾರ, ಉಮಾಬಾಯಿ ಬಾಕಳೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !