ನರಗುಂದ: ‘ಪಂಚ ಗ್ಯಾರಂಟಿ ಯೋಜನೆಗಳು ಜನರ ಕಷ್ಟಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವರದಾನವಾಗಿವೆ’ ಎಂದು ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಿವೇಕ ಯಾವಗಲ್ ಹೇಳಿದರು.

ತಾಲ್ಲೂಕಿನ ಬನಹಟ್ಟಿ ಗ್ರಾಮದ ಪಂಚಾಯಿತಿ ಸಭಾಭವನದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ತಾಯಿಂದಿರ ನೆಮ್ಮದಿ ಜೀವನಕ್ಕೆ ಹಾಗೂ ಮನೆಯ ಜವಾಬ್ದಾರಿಗಳಿಗೆ ಪ್ರೇರಕ ಶಕ್ತಿಗಳಾಗಿ ನಾಡಿನ ಮಠ ಮಂದಿರಗಳಿಗೆ, ದೈನಂದಿನ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಹಾಗೂ ಶಾಲೆಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ತುಂಬಾ ಸಹಕಾರಿ. ಗೃಹಲಕ್ಷ್ಮೀ ಯಜಮಾನಿಯರಿಗೆ ಆರ್ಥಿಕ ಚೇತರಿಕೆ ತಂದಿವೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ಸಹ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿಕೊಂಡು ಬೇರೆ ಬೇರೆ ರೂಪದಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ನಮ್ಮ ಯೋಜನೆಗಳು ಜನರ ಕಷ್ಟಕ್ಕೆ ನೆರವಾಗುವ ಮೂಲಕ ಅವರಿಗೆ ಆಸರೆಯಾಗಿವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಕೆ ಇನಾಮದಾರ ಮಾತನಾಡಿ, ‘ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳ ಮತ್ತು ಈ ಭಾಗದ ಜನರ ಸಹಕಾರದೊಂದಿಗೆ ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಶೇ 99ರಷ್ಟು ಪ್ರಗತಿ ಸಾಧಿಸಿದ್ದೇವೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸಭೆ ಜರುಗಿಸಿ ಯೋಜನೆಗಳ ಪ್ರಗತಿ ಜೊತೆಗೆ ಇನ್ನೂಳಿದ ಫಲಾಭವಿಗಳನ್ನು ಸಹ ಯೋಜನೆ ವ್ಯಾಪ್ತಿಗೊಳಪಡಿಸುವ ಸದುದ್ದೇಶದಿಂದ ನಾವಿಂದು ತಮ್ಮ ಗ್ರಾಮ ಪಂಚಾಯತಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

ಉಮಾ ದ್ಯಾವನೂರ ಮಾತನಾಡಿದರು. ಸಮಿತಿಯ ಸದಸ್ಯರಾದ ಟಿ.ಬಿ.ಶಿರಿಯಪ್ಪಗೌಡ್ರ, ವಿನಾಯಕ ಹಡಗಲಿ, ವೀರಯ್ಯ ಹುಚ್ಚಪ್ಪಯ್ಯನಮಠ, ಹನಮಂತ ರಾಮಣ್ಣವರ, ಶೇಖರಗೌಡ ಮದ್ನೂರ, ಚಂದ್ರಶೇಖರಗೌಡ ಪಾಟೀಲ, ಬಸನಗೌಡ ಮಲ್ಲನಗೌಡ್ರ, ಮೌಲಾಸಾಬ ಅರಬಜಮಾದಾರ ಹಾಗೂ ಬನಹಟ್ಟಿಯ ತಮ್ಮನಗೌಡ ಮಲ್ಲನಗೌಡ, ದ್ಯಾವನಗೌಡ ಮಲ್ಲನಗೌಡರ, ಶರಣಪ್ಪ ಕಲ್ಲಾಪುರ ಅಶೋಕ ಪಾಟೀಲ, ಪಂಚಾಯಿತಿ ಆಡಳಿತಧಿಕಾರಿ ಬಸವರಾಜ ಬಡಿಗೇರ, ಪಿಡಿಒ ಮಂಜುನಾಥ್ ಗಣಿ ಮತ್ತು ಪಂಚಾಯಿತಿ ಸಿಬ್ಬಂದಿ ಇದ್ದರು. ವ್ಯವಸ್ಥಾಪಕ ಎ ಐ ಕುಸುಗಲ್ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-23-1472828237

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.