ನರಗುಂದ: ಪಟ್ಟಣದಲ್ಲಿರುವ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ತಾಲ್ಲೂಕು ಆಸ್ಪತ್ರೆ ಸುಸಜ್ಜಿತವಾಗಿದೆ. ಜಿಲ್ಲೆಯಲ್ಲಿನ ಉಳಿದ ತಾಲ್ಲೂಕು ಆಸ್ಪತ್ರೆಗಳಿಗಿಂತ ಇಲ್ಲಿ ಉತ್ತಮ ಸೌಲಭ್ಯಗಳಿವೆ. ಇದರಿಂದಾಗಿ ನರಗುಂದ ಜತೆಗೆ ಸುತ್ತಮುತ್ತಲಿನ ಸವದತ್ತಿ, ರಾಮದುರ್ಗ, ಬಾದಾಮಿ, ನವಲಗುಂದ ತಾಲ್ಲೂಕಿನ ರೋಗಿಗಳು ಕೂಡ ಇಲ್ಲಿ ಚಿಕಿತ್ಸೆಗೆ ಬರುತ್ತಿದ್ದು, ಆಸ್ಪತ್ರೆಯ ಮೇಲಿನ ಒತ್ತಡ ದಿನೇದಿನೇ ಹೆಚ್ಚುತ್ತಿದೆ.

ನರಗುಂದ ತಾಲ್ಲೂಕು ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕದಲ್ಲಿ ಈಗ ಎರಡು ಯಂತ್ರಗಳಷ್ಟೇ ಇದ್ದು, ರೋಗಿಗಳ ಬೇಡಿಕೆಗೆ ತಕ್ಕಂತೆ ಸೇವೆ ನೀಡುವುದು ಕಷ್ಟಕರವಾಗಿದೆ. ಇದರಿಂದಾಗಿ ತಾಲ್ಲೂಕು ಹಾಗೂ ಹೊರ ಜಿಲ್ಲೆಯ ರೋಗಿಗಳಿಗೂ ತೀವ್ರ ತೊಂದರೆಯಾಗಿದೆ. ನರಗುಂದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಈಗಾಗಲೇ 18 ಮಂದಿ ನಿಯಮಿತ ರೋಗಿಗಳಿದ್ದು, ಇನ್ನೂ ಆರು ಮಂದಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಕಾಯುವ ಪಟ್ಟಿಯಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ಈಗ ಇರುವ ಸೌಲಭ್ಯಗಳು ಸಾಕಾಗುತ್ತಿಲ್ಲ. ಆದ್ದರಿಂದ ತುರ್ತಾಗಿ ಎರಡು, ಇಲ್ಲವಾದರೆ ಕನಿಷ್ಠ ಇನ್ನೂ ಒಂದು ಯಂತ್ರವನ್ನಾದರೂ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬಾರಿ ಡಯಾಲಿಸಿಸ್ಗೆ ಸುಮಾರು ₹3 ಸಾವಿರ ವೆಚ್ಚವಾಗುವುದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಸರ್ಕಾರಿ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

ನರಗುಂದ ತಾಲ್ಲೂಕು ಆಸ್ಪತ್ರೆಯಲ್ಲಿ 24 ವಯಸ್ಸಿನಿಂದ 75ರ ವಯೋಮಾನದ ಮೂತ್ರಪಿಂಡದ ರೋಗಿಗಳು ಇದ್ದಾರೆ. ಇವರಿಗೆ ವಾರಕ್ಕೆ ಎರಡು ಅಥವಾ ಮೂರು ಸಲ ಡಯಾಲಿಸಿಸ್ ಆಗಬೇಕು. ಬೆಳಿಗ್ಗೆ 7.30ಕ್ಕೆ ಡಯಾಲಿಸಿಸ್ ಆರಂಭವಾದರೆ ಮೂರು ಹಂತದಲ್ಲಿ ರಾತ್ರಿ 9ರವರೆಗೆ ನಡೆಯುತ್ತದೆ. ಒಂದು ಹಂತದಲ್ಲಿ ಎರಡು ರೋಗಿಗಳಂತೆ ಮೂರು ಹಂತದಲ್ಲಿ ನಿತ್ಯ ಆರು ರೋಗಿಗಳಿಗೆ ಡಯಾಲಿಸಿಸ್ ನಡೆಯುತ್ತದೆ. ಆದರೂ ಎಲ್ಲರಿಗೂ ಸಮಯಕ್ಕೆ ಸೇವೆ ಒದಗಿಸಲು ಸಾಧ್ಯವಾಗದೆ, ನಾಲ್ಕನೇ ಹಂತವನ್ನು ರಾತ್ರಿ 9ರಿಂದ ಮಧ್ಯರಾತ್ರಿ 12–1ರವರೆಗೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಆದರೆ, ರಾತ್ರಿ ತಡವಾಗಿ ಡಯಾಲಿಸಿಸ್ ಮುಗಿದ ಬಳಿಕ ಮನೆಗಳಿಗೆ ಅಥವಾ ದೂರದ ಊರುಗಳಿಗೆ ತೆರಳುವುದು, ಊಟ ಹಾಗೂ ಸಂಚಾರ ವ್ಯವಸ್ಥೆ ಮಾಡಿಕೊಳ್ಳುವುದು ರೋಗಿಗಳಿಗೆ ತೊಂದರೆಯಾಗಿದೆ. ವಯೋವೃದ್ಧರು ಹಾಗೂ ಗಂಭೀರ ಸ್ಥಿತಿಯಲ್ಲಿರುವವರು ಈ ವೇಳೆಗೆ ಚಿಕಿತ್ಸೆ ಪಡೆಯಲು ಒಪ್ಪುತ್ತಿಲ್ಲ.

‘ಈ ಸಮಸ್ಯೆ ಬಗೆಹರಿಸಲು ಆಸ್ಪತ್ರೆಗೆ ಮತ್ತೊಂದು ಯಂತ್ರ ಪೂರೈಸಬೇಕು ಎಂದು ಘಟಕದ ವ್ಯವಸ್ಥಾಪಕರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ರೋಗಿಗಳು ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಡಯಾಲಿಸಿಸ್ ನಡೆಸಲು ಎಲ್ಲ ರೀತಿಯ ಸೌಲಭ್ಯ ಹೊಂದಿದ ಘಟಕ ಇದೆ. ಎರಡು ಆಧುನಿಕ ಯಂತ್ರಗಳು ಇವೆ. ಇದರ ನಿರ್ವಹಣೆ ಜವಾಬ್ದಾರಿ ಹೊತ್ತ ಡಿಸಿಡಿಸಿ ಕಂಪನಿ ಸಮರ್ಪಕ ಸೇವೆ ನೀಡುತ್ತಿದೆ. ಆದರೆ, ಈಗ ಇರುವ 18 ರೋಗಿಗಳು ಹಾಗೂ ಚಿಕಿತ್ಸೆಗೆ ಕಾದಿರುವ ಇನ್ನೂ ಆರು ರೋಗಿಗಳು ಸೇರಿದಂತೆ ಒಟ್ಟು 24 ರೋಗಿಗಳಿಗೆ ಎರಡೇ ಯಂತ್ರಗಳಲ್ಲಿ ಅವರಿಗೆ ಬೇಕಾದ ಸಮಯದಲ್ಲಿ ಡಯಾಲಿಸಿಸ್ ಮಾಡುವುದು ಅಸಾಧ್ಯವಾಗಿದೆ’ ಎಂದು ಘಟಕದ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹೆಚ್ಚುವರಿ ಯಂತ್ರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ ಬಳಿಕ ಮೇಲಧಿಕಾರಿಗಳು ಬಂದು ಘಟಕ ಪರಿಶೀಲನೆ ಮಾಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಒದಗಿಸುವುದಾಗಿ ತಿಳಿಸಿ, ಅದರಂತೆ ಸಿಬ್ಬಂದಿ ಒದಗಿಸಿ ನಾಲ್ಕನೇ ಹಂತದ ಡಯಾಲಿಸಿಸ್ ಆರಂಭಿಸಲು ಸೂಚಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಸಿಬ್ಬಂದಿಯೂ ಸಿದ್ಧರಿದ್ದಾರೆ. ಆದರೆ, ರಾತ್ರಿ ಸಮಯ ಆಗುವುದರಿಂದ ನಾಲ್ಕನೇ ಹಂತದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಯಾವ ರೋಗಿಗಳೂ ಒಪ್ಪುತ್ತಿಲ್ಲ.

‘ಆರೋಗ್ಯ ಇಲಾಖೆ ವಾಸ್ತವ ಸಮಸ್ಯೆ ಅರಿತು ತುರ್ತಾಗಿ ಒಂದು ಅಥವಾ ಎರಡು ಯಂತ್ರಗಳನ್ನು ಪೂರೈಸಲು ಕ್ರಮವಹಿಸಬೇಕು. ಈ ರೀತಿ ಅಗತ್ಯವಿದ್ದಲ್ಲಿ ಮತ್ತೊಂದು ಯಂತ್ರವನ್ನು ಹಾವೇರಿ ಜಿಲ್ಲೆಯಲ್ಲಿ ಒದಗಿಸಿದ ಉದಾಹರಣೆಗಳು ಇವೆ. ಹಾಗಾಗಿ, ಈ ಸಮಸ್ಯೆಯನ್ನು ತಾಲ್ಲೂಕು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಯಾರು, ಏನಂತಾರೆ?

ವೈದ್ಯರು ಹೇಳುವಂತೆ ನಾಲ್ಕನೇ ಪಾಳಿ ರಾತ್ರಿ 9 ಗಂಟೆ ನಂತರ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆಸ್ಪತ್ರೆಯಲ್ಲಿರುವ ಎರಡು ಯಂತ್ರಗಳು ಸಾಕಾಗದು. ಒಂದು ವೇಳೆ ತಾಂತ್ರಿಕ ಸಮಸ್ಯೆ ಉಂಟಾದರೆ ಬೇರೆ ಯಂತ್ರಗಳು ಇಲ್ಲ. ಆದ್ದರಿಂದ ಹೆಚ್ಚುವರಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಒದಗಿಸಬೇಕು. ಆರೋಗ್ಯ ಇಲಾಖೆ ಹೆಚ್ಚಿನ ಗಮನ ಹರಿಸಿ ಹೆಚ್ಚುವರಿ ಘಟಕ ಆರಂಭಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಬೇಕು

ಶರೀಫ್ ರೋಣದ, ನರಗುಂದ

ಎರಡು ಯಂತ್ರಗಳು ನಿರಂತರ ಕಾರ್ಯನಿರ್ವಹಿಸುತ್ತಿವೆ. ನಾಲ್ಕನೇ ಪಾಳಿ ರಾತ್ರಿ ಇರುವ ಪರಿಣಾಮ ರೋಗಿಗಳು ಈ ವೇಳೆ ಡಯಾಲಿಸಿಸ್ ಮಾಡಿಸಿಕೊಳ್ಳಲು ಒಪ್ಪುತ್ತಿಲ್ಲ. ನಾವು ಸೇವೆ ಮಾಡಲು ಸಿದ್ದರಿದ್ದೇವೆ. ಆದರೆ ರೋಗಿಗಳು ಊರಿಗೆ ತೆರಳಲು, ಊಟಕ್ಕೆ ತೊಂದರೆಯಾಗುತ್ತದೆ ಎಂದು ಈ ಪಾಳಿಗೆ ಬರಲು ಇಷ್ಟಪಡುತ್ತಿಲ್ಲ. ಆದ್ದರಿಂದ, ಇನ್ನೊಂದು ಯಂತ್ರದ ಅವಶ್ಯಕತೆ ಇದೆ.

ಅಸ್ಲಾಂ ನದಾಫ್, ವ್ಯವಸ್ಥಾಪಕ, ಡಯಾಲಿಸಿಸ್ ಘಟಕ, ತಾಲ್ಲೂಕು ಸರ್ಕಾರಿ ಆಸ್ಪತ್ರೆ, ನರಗುಂದ

ತುರ್ತಾಗಿ ಡಯಾಲಿಸಿಸ್ ಯಂತ್ರ ಒದಗಿಸಬೇಕು. ಇಲ್ಲವಾದರೆ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಾರೆ. ಗಂಭೀರವಾದ ಕಾಯಿಲೆ ಇರುವವರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು.

ಸುರೇಶ ಜಾಧವ, ನರಗುಂದ

ಡಯಾಲಿಸಿಸ್ ಸಕಾಲಕ್ಕೆ ಮಾಡದೇ ಹೋದರೆ ರೋಗಿಗಳು ತೀವ್ರ ತೊಂದರೆಗೆ ಒಳಗಾಗಿ ಸಾವಿನ ಬಾಗಿಲು ತಟ್ಟಬಹುದು. ಅದನ್ನು ತಡೆಯಲು ತುರ್ತಾಗಿ ಆರೋಗ್ಯ ಇಲಾಖೆ ಮತ್ತೊಂದು ಡಯಾಲಿಸಿಸ್ ಯಂತ್ರ ಒದಗಿಸಬೇಕು

ನಬೀಸಾಬ ಕಿಲ್ಲೆದಾರ, ಕರವೇ ತಾಲ್ಲೂಕು ಅಧ್ಯಕ್ಷ, ನರಗುಂದ

ಹೆಚ್ಚುವರಿ ಯಂತ್ರ ಸಿಗುವ ಭರವಸೆ

ಜಿಲ್ಲಾ ಆಸ್ಪತ್ರೆ ಹೊರತು ನರಗುಂದ ತಾಲ್ಲೂಕು ಆಸ್ಪತ್ರೆಯಲ್ಲಿಯೇ ಸುಸಜ್ಜಿತ ಎರಡು ಡಯಾಲಿಸಿಸ್ ಘಟಕಗಳಿವೆ. ನಮ್ಮ ತಾಲ್ಲೂಕಿನ ಜತೆಗೆ ಬೇರೆ ತಾಲ್ಲೂಕಿನ ರೋಗಿಗಳು ಇಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಪಾಳಿ ಸಂಖ್ಯೆಯನ್ನು ಮೂರರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದೆ.

ತಿಂಗಳಿಗೆ 170 ಸಲ ಡಯಾಲಿಸಿಸ್ ಮಾಡಲಾಗುತ್ತಿದೆ. ಆದರೆ ರೋಗಿಗಳು ನಾಲ್ಕನೇ ಪಾಳಿ ಬದಲು ಎರಡು, ಮೂರನೇ ಹಂತ ಬೇಡುತ್ತಿರುವುದರಿಂದ ಇರುವ ಯಂತ್ರಗಳಲ್ಲಿ ಇದು ಸಾಕಾಗದು. ಆದ್ದರಿಂದ ಹೆಚ್ಚುವರಿ ಯಂತ್ರಕ್ಕೆ ಜಿಲ್ಲಾ ಹಾಗೂ ರಾಜ್ಯ ಆರೋಗ್ಯ ಇಲಾಖೆ, ಶಾಸಕರಿಗೂ ಮನವಿ ಮಾಡಲಾಗಿದೆ. ಯಂತ್ರಗಳು ಬರುವವರೆಗೆ ನಾಲ್ಕನೇ ಪಾಳಿ ನಡೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ರೋಗಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಶಾಸಕ ಸಿ.ಸಿ.ಪಾಟೀಲರು ತಮ್ಮ ಅನುದಾನದಲ್ಲಿ ಡಯಾಲಿಸಿಸ್ ಯಂತ್ರ ಒದಗಿಸುವುದಾಗಿ ಹೇಳಿದ್ದಾರೆ. ಶೀಘ್ರ ಬರುವ ನಿರೀಕ್ಷೆ ಇದೆ ಎಂದು ನರಗುಂದ ಭಾಸ್ಕರರಾವ್ ಭಾವೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಡೇಶ ಭದ್ರಗೌಡ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.