ಎಲ್ಲೋ ಯುದ್ಧ ನಡೆದರೆ ನಾವು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಸಮಸ್ಯೆ ಬಗೆ ಹರಿಸಬೇಕು. ಮೊದಲಿನಂತೆ ಸಿಲಿಂಡರ್ ವಿತರಣೆ ಆಗಬೇಕು. ಬಂಕ್‌ಗಳಿಗೆ ಸಮರ್ಪಕವಾಗಿ ಇಂಧನ ಪೂರೈಕೆ ಆಗಬೇಕು.
ಬೀರಪ್ಪ ಪೂಜಾರ, ಕಲಕೇರಿ ಗ್ರಾಮಸ್ಥ
ಎರಡು ದಿನ ರಜೆ ಇದ್ದ ಕಾರಣ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈಗಾಗಲೇ 1700 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ನಾಲ್ಕೈದು ದಿನಗಳಿಂದ ಬೇಡಿಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.