ನರಗುಂದ: ‘ತಾಲ್ಲೂಕಿನ ಸುರಕೋಡ ನವಗ್ರಾಮದಲ್ಲಿ ಸ್ಮಶಾನದ ಕೊರತೆ ಇದ್ದು, ಇದಕ್ಕಾಗಿ ಗ್ರಾಮಸ್ಥರು ಶಾಸಕರ ಮೇಲೆ ಒತ್ತಡ ಹಾಕಬೇಕಿದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ. ಕರಿಗೌಡ್ರ ಹೇಳಿದರು.

ಗ್ರಾಮದಲ್ಲಿ ಶನಿವಾರ ನಡೆದ ಲೋಕೋಪಯೋಗಿ ಇಲಾಖೆಯ ₹2.50 ಲಕ್ಷ ಮೊತ್ತದ ಸಿ.ಸಿ ರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಳಜಿಯಿಂದ ಸುರಕೋಡ ಸ್ಥಳಾಂತರಗೊಂಡು ನವಗ್ರಾಮ ನಿರ್ಮಾಣವಾಗಿದೆ. ಇದಕ್ಕೆ ಮೂಲಸೌಕರ್ಯ ಸಿಗಬೇಕು. ಶಾಸಕ ಸಿ.ಸಿ. ಪಾಟೀಲ ಅವರ ಪ್ರಯತ್ನದಿಂದ ಸಿ.ಸಿ ರಸ್ತೆ ನಿರ್ಮಾಣ ಆಗುತ್ತಿದ್ದು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವತ್ತ ಗುತ್ತಿಗೆದಾರರು ಗಮನಹರಿಸಬೇಕು’ ಎಂದರು.

‘ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಅತಿಕ್ರಮಣವಾದ ಜಾಗ ತೆರವುಗೊಳಿಸಿ, ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಕು’ ಎಂದು ಹೇಳಿದರು.

ಎಸ್.ಕೆ.ಪಾಟೀಲ ಮಾತನಾಡಿ, ‘ಶಾಸಕ ಸಿ.ಸಿ. ಪಾಟೀಲರ ವಿಶೇಷ ಕಾಳಜಿಯಿಂದ ರಸ್ತೆ ನಿರ್ಮಾಣವಾಗುತ್ತಿದೆ. ಎಲ್ಲರೂ ಸಹಕಾರ ನೀಡಿ ನಿರ್ಮಿಸಿಕೊಳ್ಳಬೇಕು’ ಎಂದರು.

ಬಿಜೆಪಿ ಮುಖಂಡ ಜೆ.ಎ. ಮುಲ್ಲಾನವರ ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಚಟ್ರಿ, ಮುತ್ತಯ್ಯ ಚಿಕ್ಕಮಠ, ರುದ್ರಗೌಡ ಆಡೂರ, ನಾಗನಗೌಡ ಬಳಗಾನೂರ, ಬಸನಗೌಡ ಲಿಂಗದಾಳ, ಪುಷ್ಪಾ ಪಿಡ್ಡಣ್ಣವರ, ಮಲರಡ್ಡಿ ಅಜರಡ್ಡಿ, ಪಿಡಿಒ ಎಚ್.ಎಸ್ ಚಟ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-23-1983192474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.