ಶುಕ್ರವಾರ, ಸೆಪ್ಟೆಂಬರ್ 20, 2019
25 °C
ನರಗುಂದದಲ್ಲಿ ಚನ್ನಬಸವ ಶ್ರೀಗಳ 150ನೇ ಪುಣ್ಯಸ್ಮರಣೋತ್ಸವ

ಉರಿಬಿಸಿಲಿನಲ್ಲಿ ಕುಂಭಹೊತ್ತ 2 ಸಾವಿರ ಮಹಿಳೆಯರು

Published:
Updated:
Prajavani

ನರಗುಂದ: ಪಟ್ಟಣದಲ್ಲಿ ವಿರಕ್ತಮಠದ ಚನ್ನಬಸವ ಶ್ರೀಗಳ 150ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸೋಮವಾರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. 2 ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.

ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಭಾವಚಿತ್ರದ ಮೆರವಣಿಗೆ ಮಧ್ಯಾಹ್ನ 12 ಗಂಟೆಯವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿರಕ್ತಮಠದ ಚನ್ನಬಸವ ಶ್ರೀಗಳು ಮೆರವಣಿಗೆಯಲ್ಲಿ ಭಾಗವಹಿಸಿ ರಗ್ಗಲಗಿ ಬಾರಿಸಿ ಭಕ್ತರ ಗಮನ ಸೆಳೆದರು.

ಉರಿಬಿಸಿಲಿನಲ್ಲಿ ಕುಂಭಮೇಳ:ಸುಮಾರು 3 ಗಂಟೆಗೂ ಹೆಚ್ಚು ಕಾಲ ನಡೆದ ಕುಂಭ ಮೇಳದಲ್ಲಿ ಉರಿ ಬಿಸಿಲು ಲೆಕ್ಕಿಸದೇ ಮಹಿಳೆಯರು ಭಾಗವಹಿಸಿ ಶ್ರದ್ಧಾ ಭಕ್ತಿ ಮರೆದರು. ದಾರಿಗುಂಟ ಅಲ್ಲಲ್ಲಿ ತಂಪು ಪಾನೀಯ ಸೇವೆ ಕಂಡು ಬಂತು. ಪ್ರಮುಖ ರಸ್ತೆಗಳಲ್ಲಿ ನೀರಿನ ಸಿಂಚನ ಮಾಡಿ ಹಾಗೂ ಮನೆ ಎದುರು ರಂಗೋಲಿ ಬಿಡಿಸಿ ಮೆರವಣಿಗೆಯನ್ನು ಸ್ವಾಗತಿಸಿದರು.

ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಕುಂಭಮೇಳದಲ್ಲಿ ಭಾಗವಹಿಸಿದ್ದು,  ಹೊಸ ದಾಖಲೆ ಬರೆಯಿತು.

ಮಡಿವಾಳಯ್ಯ ಶಾಸ್ತ್ರೀಗಳು, ಶಿವಕುಮಾರ ಶ್ರೀಗಳು, ಸಿದ್ದಲಿಂಗೇಶ್ವರ ಹೊಸಕೇರಿ ಇದ್ದರು.

 

Post Comments (+)