ನರೇಗಲ್: ಪವನ ವಿದ್ಯುತ್ ಘಟಕದ ಖಾಸಗಿ ಕಂಪನಿಯಲ್ಲಿ ಅನಲೋಡಿಂಗ್ ಕೆಲಸ ಮಾಡುವ ಸಂದರ್ಭದಲ್ಲಿ ಟೆಕ್ನಿಷಿಯನ್ ಗುರುಲಿಂಗಯ್ಯ ಮಠಪತಿ ಅವರ ಮೇಲೆ ಕಬ್ಬಿಣದ ಕಂಬಗಳು ಬಿದ್ದು ಬೆನ್ನುಮೂಳೆ, ಪಕ್ಕೆಲುಬುಗಳು ಮುರಿದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ರೋಣ ತಾಲ್ಲೂಕು ಮುಖಂಡ ಮಂಜುನಾಥ ಚಲವಾದಿ ಆಗ್ರಹಿಸಿದರು.

ಇಲ್ಲಿಗೆ ಸಮೀಪದ ಬೂದಿಹಾಳ ಗ್ರಾಮದ ಸರಹದ್ದಿನ ಹೊಲವೊಂದರಲ್ಲಿ ಟಾಟಾಪವರ್ ಸೋಲಾರ್ ಸಿಸ್ಟಂ ಲಿಮಿಟೆಡ್ ಕಂಪನಿಯವರು ಸ್ಥಾಪಿಸಿರುವ ಪವನ್ ವಿದ್ಯುತ್ ಘಟಕದ (ಜೀರೋ ಪಾಯಿಂಟ್) ಎದುರು ದಲಿತಪರ, ರೈತಪರ ಸಂಘಟನೆಯವರು ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

2025ರ ಸೆಪ್ಟೆಂಬರ್ 29ರಂದು ಘಟನೆ ಸಂಭವಿಸಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಯುವಕನಿಗೆ ಪ್ರಜ್ಞೆ ಬಂದಿಲ್ಲ. ಮುಗ್ದ ದಂಪತಿಗೆ ಕಾನೂನು ಗೊತ್ತಿಲ್ಲ. ಇದರ ಲಾಭವನ್ನು ಪಡೆದ ಖಾಸಗಿ ಕಂಪನಿಯವರು ಪರಿಹಾರ ಒದಗಿಸುತ್ತೇವೆ, ನೌಕರಿ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಮರೆತುಬಿಟ್ಟಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಪಿ. ಮುಳಗುಂದ ಮಾತನಾಡಿ, ನಮ್ಮದೆ ಭೂಮಿಯನ್ನು ಪಡೆದು ನಮ್ಮವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿರುವುದು ಶೋಚನೀಯ. ಯಾವುದೇ ಕೆಲಸ ಮಾಡಲಿಕ್ಕೆ ಬಾರದಂತಾಗಿರುವ ಗುರುಲಿಂಗಯ್ಯನಿಗೆ ಜೀವನಪೂರ್ತಿ ಸಂಬಳ ನೀಡಬೇಕು, ಚಿಕಿತ್ಸಾ ವೆಚ್ಚ ನೀಡಬೇಕು ಹಾಗೂ ಇತರೇ ಸವಲತ್ತುಗಳನ್ನು ಅಧಿಕೃತವಾಗಿ ನೀಡುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದರು.

ಮಂಜುನಾಥ ಬುರಡಿ, ನಿಂಗಪ್ಪ ಸಿದ್ದಪ್ಪ ಮಾದರ, ಮೈಲಾರಪ್ಪ ಮಾಡಲಗೇರಿ, ವಿರೂಪಾಕ್ಷಪ್ಪ ಹುಗ್ಗಿ, ನಾಗಪ್ಪ ಡಿ, ಚಂದುಸಾಬ ನದಾಫ್, ಪುಂಡಲಿಕಪ್ಪ ಮೆಣಸಗಿ, ಮಂಜುನಾಥ ಯಾವಗಲ, ಯಮನಪ್ಪ ಮಾದರ, ವೀರಯ್ಯ, ಸುನೀಲ್, ಶರಣಪ್ಪ, ದೇವರಾಜ, ಈರಣ್ಣ, ಮಲ್ಲಪ್ಪ, ಆನಂದ, ಬಸಪ್ಪ ಯಾವಗಲ್, ಬಸವರಾಜ ಮಾದರ ಮಲ್ಲಪ್ಪ ಶಿವಳ್ಳಿ, ಸಿದ್ದಪ್ಪ ಕಡೆಮನಿ, ರೇಣಪ್ಪ ಮಾದರ, ಬಸವರಾದ ಚಲವಾದಿ, ರುದ್ರೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-23-1069509580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.