ನರೇಗಲ್: ಪಟ್ಟಣದ ರಹಿಮಾನ್ ಶಾವಲಿ ದರ್ಗಾದ ಉರುಸ್ನ ಅಂಗವಾಗಿ ಸ್ಥಳೀಯ ಗಣೇಶ ದೇವಸ್ಥಾನದ ರಂಗಮಂಟಪದಲ್ಲಿ ಸೋಮವಾರ ರಾತ್ರಿ ಕಟ್ಟಿಬಸವೇಶ್ವರ ನಾಟ್ಯ ಸಂಘದವರಿಂದ ಪ್ರದರ್ಶನಗೊಂಡ ಸಾಮಾಜಿಕ ನಾಟಕ ‘ಧರ್ಮದ ನುಡಿ ಬೆಂಕಿಯ ಕಿಡಿ’ ಪ್ರೇಕ್ಷಕರ ಮನಸೂರೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರೇಗಲ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ, ಗ್ರಾಮೀಣ ಭಾಗದಲ್ಲಿ ಮಾತ್ರ ನಾವು ಇಂತಹ ಸೊಗಡನ್ನು ಕಾಣಬಹುದು. ನಾಟಕಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿ, ‘ಉರುಸಿನ ಅಂಗವಾಗಿ ನಮ್ಮ ಓಣಿಯ ಯುವಕರು ನಾಟಕ ಮಾಡುತ್ತೇವೆ ಎಂದು ಹೇಳಿದಾಗ ನಮಗೆ ಸಂತೋಷವಾಯಿತು. ಅವರಿಗೆ ಪ್ರೋತ್ಸಾಹ ನೀಡಿದೇವು’ ಎಂದು ಹೇಳಿದರು.

ವಕೀಲ ಉಮೇಶ ಸಂಗನಾಳಮಠ, ಮಹಾದೇವಪ್ಪ ಬೇವಿನಕಟ್ಟಿ, ಶಂಕರ ರೊಟ್ಟಿ, ಕಲ್ಮೇಶ ತೊಂಡಿಹಾಳ, ಶಂಕ್ರಣ್ಣ ದೊಡ್ಡಣ್ಣವರ, ಮುತ್ತಪ್ಪ ಮಾವಿನಕಾಯಿ, ಪರಪ್ಪ ಬೆಡಗಲ್ಲ, ಪ್ರಕಾಶ ಪಾಯಪ್ಪಗೌಡ್ರ, ಬಸವರಾಜ ಕಲಾಲಬಂಡಿ, ಉಮೇಶ ಕರಮುಡಿ, ಪ್ರಕಾಶ ಕೊತಬಾಳ, ವೀರಣ್ಣ ಗುಜಮಾಗಡಿ, ಫಕೀರಗೌಡ ಪಾಯಪ್ಪಗೌಡ್ರ, ಶಿವಣ್ಣ ಮುಗಳಿ, ಬಸವರಾಜ ಮಾಳವಾಡ, ಮಂಜುನಾಥ ಮಲ್ಲನಗೌಡ್ರ, ಪ್ರಾಚಾರ್ಯ ಅಡವಿ, ಅಶೋಕ ಬಾರಕೇರ, ಉಡಚಪ್ಪ ತಳವಾರ, ಮುತ್ತಪ್ಪ ಬಿಷ್ಟನಗೌಡ್ರ, ಶ್ರೀಕಾಂತ ಹೊಸಮನಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-23-1398778524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.