ನರೇಗಲ್: ಬೆಳೆ ವಿಮೆ, ಬೆಳೆ ಹಾನಿ ವಿತರಣೆಯಲ್ಲಿನ ತಾರತಮ್ಯ, ಬೆಂಬಲ ಬೆಲೆ ಯೋಜನೆಯಡಿ 50 ಕ್ವಿಂಟಲ್ ಕುಸುಬೆ ಬೆಳೆ ಖರೀದಿ ಹಾಗೂ ಪವನ ವಿದ್ಯುತ್ ಘಟಗಳ ಭಾರಿ ವಾಹನ ಓಡಾಟದಿಂದ ಹದಗೆಟ್ಟಿರುವ ರಸ್ತೆಗಳನ್ನು ಕಂಪನಿಯ ವತಿಯಿಂದ ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಗುರುವಾರ ನರೇಗಲ್ ರೈತ ಸೇನೆ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು.

ಸಂತೆ ಬಜಾರದಿಂದ ಹೊಸ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಬಸ್ ನಿಲ್ದಾಣದ ಹತ್ತಿರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ನಂತರ ಉಪ ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನಾ ಸಭೆ ನಡೆಸಲಾಯಿತು.

ರೈತ ಸೇನಾ ಅಧ್ಯಕ್ಷ ಶರಣಪ್ಪ ಧರ್ಮಾಯತ, ‘ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿ ಮತ್ತು ಬೆಳೆ ವಿಮೆಯನ್ನು ನರೇಗಲ್ ಹೋಬಳಿಯ ಎಲ್ಲ ರೈತರಿಗೆ ನೀಡಿಲ್ಲ. ಕೆಲ ರೈತರಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಚಂದ್ರು ಹೊನವಾಡ ಮಾತನಾಡಿ, ‘ನಾಫೇಡ್ ಬೆಂಬಲ ಬೆಲೆ ಯೋಜನೆಯಡಿ ಕುಸುಬೆಯನ್ನು ಪ್ರತಿ ರೈತರಿಂದ 20 ಕ್ವಿಂಟಲ್ ಮಾತ್ರ ಖರೀದಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ, ಖರೀದಿ ಮಿತಿಯನ್ನು 50 ಕ್ವಿಂಟಲ್ಗೆ ಹೆಚ್ಚಿಸಬೇಕು’ ಎಂದರು.

ರೋಣ-ಗಜೇಂದ್ರಗಡ ತಹಶೀಲ್ದಾರ್ ನಾಗರಾಜ ಕೆ. ಮಾತನಾಡಿ, ‘ಬೆಳೆ ವಿಮೆ ಮತ್ತು ಬೆಳೆ ಪರಿಹಾರ ವಿತರಣೆಗಾಗಿ ಕಡ್ಡಾಯವಾಗಿ ರೈತರು ಎಫ್ಐಡಿ ಮಾಡಿಸುವಂತೆ ಸಾಕಷ್ಟು ಮನವಿ ಮಾಡಲಾಗಿದೆ. ಎಫ್ಐಡಿಯಲ್ಲಿ ವ್ಯತ್ಯಯವಾದ ರೈತರ ಖಾತೆಗೆ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗಿದೆ. ನರೇಗಲ್ ಹೋಬಳಿ 8500 ರೈತರು ಎಫ್ಐಡಿಯಲ್ಲಿ ನ್ಯೂನತೆಗಳಿವೆ. ಅದರಿಂದಾಗಿ ಪರಿಹಾರ ವಿತರಣೆಯಲ್ಲಿ ಸಮಸ್ಯೆಯಾಗಿದೆ. ರೈತರು ತತಕ್ಷಣವೇ ಎಫ್ಐಡಿ ಮತ್ತು ಇಕೆವೈಸಿ ಮಾಡಿಸಿಕೊಂಡಲ್ಲಿ ಪರಿಹಾರ ವಿತರಣೆಯಾಗಲಿದೆ. ಉಳಿದ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ರೈತ ಮುಖಂಡ ಆನಂದ ಕೋಟಗಿ ಮಾತನಾಡಿದರು.

ಉಪತಹಶೀಲ್ದಾರ್ ಜಿ. ಎಸ್. ದೊಡ್ಡಮನಿ, ಗ್ರಾಮಾಡಳಿತಾಧಿಕಾರಿ ಸಿಂಧೂ ಟಿ, ಎಎಸ್ಐ ಶೇಖರ ಹೊಸಳ್ಳಿ, ಅಶೋಕ ಬೇವಿನಕಟ್ಟಿ, ಬಾಳಪ್ಪ ಸೋಮಗೊಂಡ, ಅಂದಯ್ಯ ಸಂಗನಾಳಮಠ, ವೀರುಪಾಕ್ಷಪ್ಪ ಲಕ್ಕನಗೌಡ್ರ, ಶಿವನಗೌಡ ಕಡದಳ್ಳಿ, ರಮೇಶ ಇಟ್ಟಣ್ಣವರ, ಕಳಕಪ್ಪ ರೋಣದ, ಈರಣ್ಣ ಹೂಗಾರ, ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-23-86827093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.