ನರೇಗಲ್: ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಪಟ್ಟಣದ ಹಜರತ್ ರಹಿಮಾನ ಶ್ಯಾವಲಿ (ರಹ) ಶರಣರ ದರ್ಗಾದ ಉರುಸ್ ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ದರ್ಗಾದಿಂದ ಆರಂಭವಾದ ಮೆರವಣಿಗೆ ಗಣೇಶ ಗುಡಿ, ದ್ಯಾಮಮ್ಮನ ಗುಡಿ, ಗದಗ ರಸ್ತೆ, ಪಟ್ಟಣ ಪಂಚಾಯಿತಿ ರಸ್ತೆ, ಹೊಸ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಸಂಚರಿಸಿತು.

ಇದೇ ಸಂದರ್ಭದಲ್ಲಿ ಹೊಸ ಬಸ್ ನಿಲ್ದಾಣದಿಂದ ಲಕ್ಷ್ಮಮ್ಮನ ಪಾಲಕಿಯನ್ನು ಕೋಚಲಾಪುರ ಗ್ರಾಮಕ್ಕೆ ಬೀಳ್ಕೊಡಲಾಯಿತು. ಭಕ್ತರು ಪುಷ್ಪವನ್ನು ಸುರಿದರು. ಮೆರವಣಿಗೆ ಹೊರಟ ಅಲಂಕೃತ ವಾಹನ ಮೇಲೆ ಕುಳಿತು ಈಗಿನ ಸಯ್ಯದ್ ಮಂಜೂರ ಹುಸೇನ ಶ್ಯಾವಲಿಗಳವರು ಭಕ್ತರಿಗೆ ದರ್ಶನ ನೀಡಿದರು.

ವಾಹನದ ಮುಂದೆ ಕುದುರೆ ಸಾಗಿತು. ಮೆರವಣಿಗೆಯುದ್ಧಕ್ಕೂ ಕಲಾ ತಂಡಗಳು ಭಾಗವಹಿಸಿ ಮೆರುಗು ಹೆಚ್ಚಿಸಿದ್ದವು. ನರೇಗಲ್, ಕೋಚಲಾಪುರ, ತೋಟಗಂಟಿ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ಮಲ್ಲಾಪುರ, ನಿಡಗುಂದಿ, ಕೋಟುಮಚಗಿ, ಅಡ್ನೂರ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-23-910931823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.