ನರೇಗಲ್: ಸಮೀಪದ ಜಕ್ಕಲಿ ಗ್ರಾಮದಲ್ಲಿ ಹಲವು ದಶಕಗಳಿಂ ದಲೂ ಮುಂದುವರಿದಿ ರುವ ಅಗಸರ ಹಳ್ಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದ ಹಿನ್ನೆಲೆಯಲ್ಲಿ ವಿಂಡ್ ಕಂಪನಿಯವರು ಹಾಕಿದ್ದ ಗರಸನ್ನು ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.

ಅತಿ ಭಾರದ ಹಾಗೂ ಉದ್ದದ ವಾಹನಗಳ ಸಂಚಾರಕ್ಕಾಗಿ ಖಾಸಗಿ ವಿಂಡ್ ಕಂಪನಿಯವರು ಅನಧಿಕೃತವಾಗಿ ತಾತ್ಕಾಲಿಕ ರಸ್ತೆ ಹಾಗೂ ಸೇತುವೆ ನಿರ್ಮಿಸಿದ್ದರು. ಇದರಿಂದ ಪ್ರತಿ ವರ್ಷ ಮಳೆ ಬಂದಾಗ ಅಗಸರ ಹಳ್ಳ ತುಂಬಿ ಹರಿದು ರೋಣ– ಜಕ್ಕಲಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಹೊಲಗಳಿಗೆ ನುಗ್ಗುತ್ತದೆ. ಇದರಿಂದ ಬೆಳೆಹಾನಿ, ಮಣ್ಣಿನ ಫಲವತ್ತದೆ ನಾಶವಾಗುತ್ತದೆ ಎನ್ನುವ ಆರೋಪ ರೈತರದ್ದಾಗಿದೆ.

ಮೇ 24ರಂದು ಸುರಿದ ಭಾರೀ ಮಳೆಯಿಂದ ರಸ್ತೆಗೆ ಮುಳ್ಳಿನರಾಶಿಹರಿದು ಬಂದು ತಡರಾತ್ರಿವರೆಗೂ ಜನರು ತೊಂದರೆ ಅನುಭವಿಸಿದ್ದಾರೆ. ಈ ಕುರಿತು ಹಲವು ಬಾರಿ ತಹಶೀಲ್ದಾರ್ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಂಡ್ ಕಂಪನಿಯವರಿಗೆ ತೊಂದರೆ ಆಗುತ್ತದೆ ಎಂದು ದೌಡಾಯಿಸಿ ಬರುವ ಅಧಿಕಾರಿಗಳು, ಜನರಿಗೆ ತೊಂದರೆ ಆದರೆ ಮೇಲಧಿಕಾರಿಗಳಿಗೆ ತಿಳಿಸಬೇಕು, ಅನುದಾನ ಬರಬೇಕು ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಆದರೆ ಪರಿಹಾರ ಒದಗಿಸುತ್ತಿಲ್ಲ. ತಾಲ್ಲೂಕಿನ ಅಧಿಕಾರಿಗಳು ರೈತರ, ಗ್ರಾಮಸ್ಥರ ಪರ ಕೆಲಸ ಮಾಡದೆ ಕೇವಲ ವಿಂಡ್ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪ ಇಲ್ಲಿನ ಜನರದ್ದಾಗಿದೆ.

ಮಳೆ ನೀರು ರೈತ ಶೇಖಣ್ಣ ಮೇಟಿ ಅವರ ಜಮೀನಿಗೆ ನುಗ್ಗಿ ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ಗರಸು ತೆರವಿಗೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೇಲ್ಸೇತುವೆ ನಿರ್ಮಾಣ ಕುರಿತುಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂಬ ಅಧಿಕಾರಿಗಳ ಉತ್ತರಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿತಕ್ಷಣ ಶಾಶ್ವತ ಪರಿಹಾರಕ್ಕೆ ಒತ್ತಾಯಿ ಸಿದರು. ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

‘ವಿಂಡ್ ಕಂಪನಿಯ ತಾತ್ಕಾಲಿಕ ರಸ್ತೆ ನೀರಿನ ಹರಿವಿಗೆ ಅಡ್ಡಿಯಾಗಿದ್ದು, ಜಮೀನುಗಳಿಗೆ ಹಾನಿಯಾಗಿದೆ. ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ರೈತರು ಸೇರಿ ಅಕ್ರಮ ರಸ್ತೆ ತೆರವುಗೊಳಿಸಿದ್ದೇವೆ’ ಎಂದು ಹಿರಿಯ ರೈತ ಮುಖಂಡ ಶೇಖಣ್ಣ ಮೇಟಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-23-6151067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.