ನರೇಗಲ್: ಹೋಬಳಿಯಾದ್ಯಂತ ಮಂಗಳವಾರ ಸಂಜೆ ಬೀಸಿದ ಮಳೆ–ಗಾಳಿಗೆ ಅನೇಕ ಕಡೆ ಗಿಡಗಳು, ವಿದ್ಯುತ್ ಕಂಬಗಳು ಹಾಗೂ ಬಾಳೆ ಗಿಡಗಳು ಧರೆಗುರುಳಿ ಅಪಾರ ನಷ್ಟ ಆಗಿದೆ.

ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ರೈತ ಮೃತ್ಯುಂಜಯ ಧಡೇಸೂರಮಠ ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕ್ಕುರುಳಿವೆ. ಸಾಲ ಮಾಡಿ ಗಿಡಗಳನ್ನು ನೆಟ್ಟಿದ್ದು ಅಂದಾಜು ₹4 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬೂದಿಹಾಳನಲ್ಲಿ 2 ಕಡೆ, ಜಕ್ಕಲಿಯಲ್ಲಿ 6 ಕಡೆ ಕಂಬಗಳ ಮೇಲೆ ಗಿಡಗಳು ಮುರಿದು ಬಿದ್ದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಮಾರನಬಸರಿ, ನಿಡಗುಂದಿಕೊಪ್ಪ, ಹಾಲಕೆರೆ, ನಿಡಗುಂದಿ ಹಾಗೂ ಕಳಕಾಪುರ ಗ್ರಾಮಗಳಲ್ಲಿಯೂ ಮಳೆ–ಗಾಳಿಗೆ ವಿದ್ಯುತ್ ಕಂಬಗಳ ಹಾಗೂ ತಂತಿಗಳ ಮೇಲೆ ಗಿಡಗಳು ಮುರಿದು ಬಿದ್ದ ಘಟನೆ ನಡೆದಿದೆ ಎಂದು ಹೆಸ್ಕಾಂ ಸಿಬ್ಬಂದಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-23-74259194

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.