ನರೇಗಲ್: ಸುಗ್ಗಿಕಾಲ ಮುಗಿದು ಬೇಸಿಗೆ ಬಿಸಿಲು ಜೋರಾಗುತ್ತಿರುವ ಹೊತ್ತಿನಲ್ಲಿ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಶ್ಯಾವಿಗೆ ಸುಗ್ಗಿ ಜೋರಾಗಿ ನಡೆದಿದೆ.

ಆಧುನಿಕತೆ ಕಡೆಗೆ ವಾಲಿರುವ ಇಂದಿನ ಮಹಿಳೆಯರು ಬಹುತೇಕ ಮನೆಗಳಲ್ಲಿ ಸಾಂಪ್ರದಾಯಿಕ ಶ್ಯಾವಿಗೆ ಮಾಡುವ ಮಣೆಗಳನ್ನು ಹೊಂದಿಲ್ಲ. ಆದಕಾರಣ ಹಳೇ ಪದ್ಧತಿಯನ್ನು ಬಿಟ್ಟು ಯಂತ್ರದ ಮೂಲಕ ಒತ್ತುವ ಶ್ಯಾವಿಗೆಗೆ ಮಾರು ಹೋಗುತ್ತಿದ್ದಾರೆ.

ಹೀಗಾಗಿ ನರೇಗಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಇಲ್ಲಿನ ಈಶ್ವರ ನಗರದಲ್ಲಿರುವ ಶ್ಯಾವಿಗೆ ಸಿದ್ಧಪಡಿಸುವ ಗಿರಣಿಗೆ ಬೆಳಿಗ್ಗೆ 5ಕ್ಕೆ ಬಂದು ಶ್ಯಾವಿಗೆ ಮಾಡಿಸಲು ಪಾಳೆ ಹಚ್ಚುತ್ತಿದ್ದಾರೆ. ಮಧ್ಯಾಹ್ನ 12 ಗಂಟೆವರೆಗೆ ಬಿಡುವಿಲ್ಲದಂತೆ ಕೆಲಸ ಮಾಡುವ ಶ್ಯಾವಿಗೆ ಯಂತ್ರಕ್ಕೀಗ ದುಡಿಮೆಯ ಕಾಲವಾಗಿದೆ.

ಶ್ಯಾವಿಗೆ ಸಿದ್ಧಪಡಿಸಿಡಿಸುತ್ತಿರುವ ಕಾರಣ ಅಕ್ಕಿ, ಉದ್ದು ಮತ್ತು ಗೋಧಿ ಹಿಟ್ಟಿಗೂ ಬೇಡಿಕೆ ಹೆಚ್ಚಾಗಿದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಪುಡಿ ಹಿಟ್ಟನ್ನು ಬಿಸಿನೀರಿನಲ್ಲಿ ಕುದಿಸಿ ಮುದ್ದೆಯಂತೆ ತಯಾರಿಸುತ್ತಾರೆ. ಹದಕ್ಕೆ ಬಂದ ಮೇಲೆ ಅದನ್ನು ಪುಟ್ಟಿಯಲ್ಲಿ ಹಾಕಿಕೊಂಡು ಶ್ಯಾವಿಗೆ ಒತ್ತುವ ಗಿರಣಿಗೆ ತೆಗೆದುಕೊಂಡು ಹೋಗುತ್ತಾರೆ. ಪ್ರಮಾಣಕ್ಕೆ ತಕ್ಕಂತೆ ಯಂತ್ರದಲ್ಲಿ ಹಾಕಿದಾಗ ಎಳೆಎಳೆಯಾಗಿ ಶ್ಯಾವಿಗೆ ಬರುತ್ತದೆ.

ಅದನ್ನು ಒಂದು ಕೈಯಿಂದ ತೆಗೆದುಕೊಂಡು ಗಿರಣಿಯ ಎದುರಿನ ಬಯಲು ಜಾಗದಲ್ಲಿ ಒಣಗಿಸುತ್ತಾರೆ. ಒಂದು ಕೋಲಿನ ಮೇಲೆ ಹರಡಿ ಬಿಸಿಲಿಗೆ ಇಡುತ್ತಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಒಣಗಿದ ನಂತರ ಅದನ್ನು ತೆಗೆದುಕೊಂಡು ಡಬ್ಬಿಗಳಲ್ಲಿ ಹಾಕುತ್ತಾರೆ. ನಂತರ ಮನೆಗೆ ಹೋಗಿ ಮರುದಿನ ಬಿಸಿಲೇರುತ್ತಿದ್ದಂತೆ ಒಣಗಿಸುತ್ತಾರೆ. ಸಂಜೆ 5 ಗಂಟೆಯ ನಂತರ ಬಿಸಿಲಿಗೆ ಗರಿಗರಿಯಾಗಿ ಒಣಗಿದ ಶ್ಯಾವಿಗೆಯನ್ನು ಡಬ್ಬಿಗಳಲ್ಲಿ ಶೇಖರಿಸಿಡುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ವರ್ಷದವರೆಗೂ ಕೆಡದಂತೆ, ವಾಸನೆ ಬರದಂತೆ ಕಾಪಾಡಬಹುದು ಎಂಬುದು ಮಹಿಳೆಯರ ಅಭಿಪ್ರಾಯವಾಗಿದೆ.

ಪ್ರತಿದಿನ ಜೋಳ, ಗೋಧಿ, ಕಡಲೆ ಹಾಗೂ ಇತರೆ ಕಾಳುಕಡಿಗಳನ್ನು ಹಾಕುವ ಗಿರಣಿ ಹೊಂದಿರುವ ಪೂಜಾರ ಕುಟುಂಬದವರು ನಾಲ್ಕೈದು ದಶಕದಿಂದ ಬೇಸಿಗೆಯಲ್ಲಿ ಶ್ಯಾವಿಗೆ ತಯಾರಿಸುತ್ತಿದ್ದಾರೆ. ರವೆ ಶ್ಯಾವಿಗೆ, ಅಕ್ಕಿ ಶ್ಯಾವಿಗೆ, ಗೋಧಿ ಶ್ಯಾವಿಗೆ ಮಾಡಿಕೊಡುತ್ತಾರೆ. ಬೇಸಿಗೆಯಲ್ಲಿ ಸಿದ್ಧವಾದ ಶ್ಯಾವಿಗೆಯನ್ನೇ ಜತನದಿಂದ ಜನರು ಕಾಯ್ದಿಡುತ್ತಾರೆ.

‘ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರು ಸಹ ದೂರದ ಊರುಗಳಿಂದ ನರೇಗಲ್ಗೆ ಬಂದು ಶ್ಯಾವಿಗೆ ಮಾಡಿಸಿಕೊಂಡು ಹೋಗುತ್ತಾರೆ. ಒಂದು ಕೆ.ಜಿ.ಗೆ ₹10ರಂತೆ ಶ್ಯಾವಿಗೆ ಹಾಕಿಕೊಡುತ್ತೇವೆ. ಬೇಸಿಗೆ ಹೆಚ್ಚಿದ್ದಾಗ ಶ್ಯಾವಿಗೆ ಮಾಡಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಸದ್ಯ ಪ್ರತಿದಿನ ಮೂರು ಕ್ವಿಂಟಲ್ವರೆಗೆ ಶ್ಯಾವಿಗೆ ಹಾಕುತ್ತಿದ್ದೇವೆ’ ಎಂದು ಶ್ಯಾವಿಗೆ ಗಿರಣಿ ಮಾಲೀಕ ರವಿ ಪೂಜಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹಪ್ಪಳ, ಸಂಡಿಗೆ ತಯಾರಿಕೆ ಸಪ್ಪಳ: ಹಳ್ಳಿಗಳಲ್ಲಿ ಓಣಿಯ ಮಹಿಳೆಯರೆಲ್ಲ ಸೇರಿ ಅವರ ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ ಹಪ್ಪಳ, ಸಂಡಿಗೆ, ಚಕ್ಕುಲಿ ಸೇರಿದಂತೆ ದೇಸಿ ಕುರುಕಲು ತಿನಿಸುಗಳ ಸಿದ್ದತೆಯನ್ನು ಮಾಡುತ್ತಿದ್ದಾರೆ.

ಸೌತೆ ಬೀಜ, ಆಣಿಕಲ್ ಬೀಜದಂತಹ ಪದಾರ್ಥಗಳನ್ನು ಇಡೀ ವರ್ಷಕ್ಕಾಗುವಷ್ಟು ತಯಾರಿಸಿಡುತ್ತಿದ್ದಾರೆ. ಹರಟೆ ಹೊಡೆಯುತ್ತಾ ಸಂಡಿಗೆ ಹಾಕಿ ಹಳೇ ಹಂಡೆ, ತಪ್ಪಲಿ, ಸ್ಟೀಲ್ ಡಬ್ಬಿಗಳಲ್ಲಿ ಭರ್ತಿ ಮಾಡುತ್ತಿದ್ದಾರೆ. ಸದ್ಯ ರಜೆಯಲ್ಲಿರುವ ಶಾಲಾ ಮಕ್ಕಳು ಸಹ ಅಮ್ಮಂದಿರು ಮಾಡುವ ಕೆಲಸಕ್ಕೆ ಉತ್ಸಾಹದಿಂದ ಸಹಾಯ ಮಾಡುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-23-1017982386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.