ನರಗುಂದ: ಮದ್ಯವರ್ಜನ ಶಿಬಿರ ಸಂಜೀವಿನಿ ಇದ್ದಂತೆ. ದುಶ್ಚಟಮುಕ್ತ ಸಮಾಜವನ್ನು ನಿರ್ಮಿಸುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಗುರಿಯಾಗಿದೆ ಎಂದು ಕೊಪ್ಪಳ ಜನಜಾಗೃತಿ ಯೋಜನಾಧಿಕಾರಿ ನಾಗೇಶ ವೈ.ಎಂ ಹೇಳಿದರು.

ಪಟ್ಟಣದ ರೋಟಯ್ರಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನರಗುಂದ ತಾಲ್ಲೂಕಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಹಾಗೂ ಸಂಶೋಧನಾ ಕೇಂದ್ರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ 2059ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕುಡಿತದಿಂದ ಸತ್ತ ವ್ಯಕ್ತಿಯ ಕುಟುಂಬವು ಕತ್ತಲಲ್ಲಿ ಮುಳುಗಬಾರದು. ಆದ್ದರಿಂದ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಶಿಬಿರವನ್ನು ಮಾಡುತ್ತಿದ್ದೇವೆ. ಇದರ ಸದುಪಯೋಗವನ್ನು ಮದ್ಯವ್ಯಸನಿಗಳು ಪಡೆದು ಅದರಿಂದ ಮುಕ್ತರಾಗಬೇಕಿದೆ ಎಂದರು.

ತಹಶೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಕುಡಿತಕ್ಕೆ ದಾಸರಾದ ವ್ಯಕ್ತಿಗಳು ಮನೆ, ಮಠ ಮಾರಾಟ ಮಾಡಿ, ಕುಟುಂಬವನ್ನು ಬೀದಿಗೆ ತರುತ್ತಾರೆ. ಸಮಾಜದಲ್ಲಿ ಗೌರವ ಸಿಗಲ್ಲ, ಆದ್ದರಿಂದ ಸಂಜೀವಿನಿಯಂತೆ ಇರುವ ಈ ಮದ್ಯವರ್ಜನ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಿ ಎಂದರು.

ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಸರ್ವತೋಮುಖ ಅಭಿವೃದ್ಧಿ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. 1992 ರಿಂದ 96ರವರೆಗೆ ಧರ್ಮಸ್ಥಳ ಸಂಘದಿಂದ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಹೋರಾಟ ಮಾಡಲಾಯಿತು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಕೊನೆಗೆ ಬೆಳ್ತಂಗಡಿ ಹಾಗೂ ಸಂಡೂರ ತಾಲ್ಲೂಕಗಳಲ್ಲಿ ಮಾತ್ರ ಮದ್ಯಮಾರಾಟ ನಿಷೇಧ ಮಾಡಿತು. ಪರಿಣಾಮ ಅಲ್ಲಲ್ಲಿ ಜನರು ಕಳ್ಳಬಟ್ಟಿ ತಯಾರಿ ಹಾಗೂ ಕಳ್ಳಬಟ್ಟಿ ಸೇವನೆ ಘಟನೆಗಳು ಜರುಗಿದವು. ಕೊನೆಗೆ ಸಂಘವು ಪರ್ಯಾಯ ಮಾರ್ಗ ಕಂಡುಹಿಡಿಯಲು ಮದ್ಯವರ್ಜನ ಶಿಬಿರಗಳನ್ನು ಪ್ರಾರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 34 ವರ್ಷಗಳಲ್ಲಿ 2059 ಶಿಬಿರಗಳನ್ನು ನಡೆಸಲಾಗಿದೆ ಎಂದರು.

ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾ,ಡಿ ಹಾಲು ಸಿಗದಿದ್ದರೂ ಬದಲಾಗಿ ಆಲ್ಕೋಹಾಲ್ ಸಿಗುತ್ತದೆ. ಹಾಲಿನ ಅಂಗಡಿಗಳಿಗಿಂತ ಸಾರಾಯಿ ಅಂಗಡಿಗಳೇ ಬೇಗ ತೆರೆಯುತ್ತವೆ. ವೇದಿಕೆಯಲ್ಲಿನ ತಹಶೀಲ್ದಾರ್ ಅವರು ಮದ್ಯದಂಗಡಿಗಳು ನಿಯಮಪಾಲನೆ ಮಾಡುವಂತೆ ಗಮನ ಹರಿಸಬೇಕು. ಕಾನೂನು ಪಾಲನೆ ಆಗಬೇಕು ಎಂದರು.

ವಿರಕ್ತಮಠದ ಶಿವಕುಮಾರ ಶ್ರೀ ಮಾತನಾಡಿ, ಶಿಬಿರದ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಕುಟುಂಬದ ಕಷ್ಟಕ್ಕೆ ಕುಡಿತವೇ ಕಾರಣ. ಕುಡಿತವೇ ಜೀವನ ಆಗಬಾರದು. ದುಶ್ಚಟಮುಕ್ತ ಜೀವನ ನಡೆಸಿ, ಸುಂದರವಾದ ಬದುಕು ಕಟ್ಟಿಕೊಳ್ಳಿರೆಂದು ಹೇಳಿದರು.

ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷ ರಾಜು ಕಲಾಲ, ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಎಚ್.ಬಿ ಅಸೂಟಿ, ಚನ್ನಪ್ಪ ಕಂಠಿ, ವಿಜಯ ಕುಲಕರ್ಣಿ, ಮಂಜುನಾಥ ಮೆಣಸಗಿ ಮಾತನಾಡಿದರು. ಯೋಜನಾಧಿಕಾರಿ ಮಾಲತಿ ದಿನೇಶ, ಪ್ರಶಾಂತ ಜೋಶಿ, ಚಂದ್ರಗೌಡ ಪಾಟೀಲ, ಕೊಟ್ರೇಶ ಕೊಟ್ರಶೆಟ್ಟಿ, ಶಂಕ್ರಣ್ಣ ಇಂಗಳಳ್ಳಿ, ವಿ.ಎನ್ ಕೊಳ್ಳಿಯವರ, ನೀಲಪ್ಪ ಗುಡದನ್ನವರ, ಪರಶುರಾಮ ಭೋವಿ, ನಬೀಸಾಬ ಕಿಲೇದಾರ, ಉಮಾ ದ್ಯಾವನೂರ, ಶಿಬಿರಾಧಿಕಾರಿ ರಮೇಶ ಕೆ, ಆರೋಗ್ಯ ಸಹಾಯಕ ವೆಂಕಟೇಶ, ಜನಜಾಗೃತಿ ಮೇಲ್ವಿಚಾರಕ ಸಚಿನ್, ಯೋಗ ಶಿಕ್ಷಕ ಎಫ್ ವ್ಹಿ ಶಿರುಂದಮಠ, ರಾಜೇಶಸಾಬ ತಹಶೀಲ್ದಾರ, ಆನಂದ ಗೌಳಿ ಹಾಗೂ ನವಜೀವನ ತಂಡ, ಶೌರ್ಯಶ್ರೀ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-1408934196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.