ನರಗುಂದ: ‘ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕಾಗಿದೆ. ದೇಶಾಭಿಮಾನ ಮತ್ತು ನೆಲದ ಸಂಸ್ಕೃತಿ ಬಿಂಬಿಸುವ ಪಠ್ಯಗಳು ರೂಪುಗೊಳ್ಳಬೇಕಿದೆ’ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಿವೇಕಾನಂದ ಪಬ್ಲಿಕ್ ಸ್ಕೂಲ್ನ ನೂತನ ಸಿಬಿಎಸ್ಇ ಪಠ್ಯಕ್ರಮ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ. ಮಾತನಾಡಿದರು.

‘ಭಾರತದ ಜ್ಞಾನ ಭಂಡಾರಗಳಾದ ಅನೇಕ ವಿಶ್ವವಿದ್ಯಾಲಯಗಳನ್ನು ನಾಶ ಮಾಡಿದ್ದಾರೆ. ಪುಸ್ತಕ ಭಂಡಾರವನ್ನು ಕದ್ದುಕೊಂಡು ಹೋಗಿದ್ದಾರೆ. ಇದರ ಸಂಶೋಧನೆ ನಿರಂತರ ನಡೆಯಬೇಕು. ನಮ್ಮ ಸಂಸ್ಕೃತಿ ಪಠ್ಯ ಬರಬೇಕು’ ಎಂದರು.

ಸಂಸ್ಥೆಯ ಚೇರಮನ್, ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಮಾತನಾಡಿ, ‘ಎಲ್ಲರೂ ವಿವೇಕಾನಂದರಾಗಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ನಾವೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ’ ಎಂದರು.

ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಪತ್ರೀವನಮಠದ ಗುರುಸಿದ್ಧವೀರ ಶಿವಾಚಾರ್ಯರು, ಶಿವಕುಮಾರ ಶ್ರೀ, ನಿಜಗುಣ ಶ್ರೀ, ರಾಜು ಕಲಾಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ. ಎಸ್.ಪಾಟೀಲ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಪ್ರವೀಣ ಯಾವಗಲ್ಲ, ಚಂಬಣ್ಣ ಕೋರಿ, ಬಿ.ಜಿ.ನಂದಿ, ಎಸ್.ಬಿ.ಹೊಸಮನಿ, ಜಿ.ಎಸ್.ಗಂಗಲ್, ಜಿ.ಟಿ.ದೊಡಮನಿ, ಎಸ್.ಬಿ.ಯಲ್ಲರಡ್ಡಿಯವರ, ಕೆ.ಎಚ್. ಖ್ಯಾಡದ, ಪ್ರಾಚಾರ್ಯ ಸತೀಶ್ಚಂದ್ರ ಎಚ್.ವ್ಹಿ, ಶರಣು ಅಂಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-311608939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.