ನರಗುಂದ: ಮುಂಗಾರು ಬಿತ್ತನೆಗೆ ರೈತರು ಬೀಜ, ಗೊಬ್ಬರ ಖರೀದಿಸುತ್ತಿದ್ದಾರೆ. ಅಂಗಡಿಯವರು ಕಡ್ಡಾಯವಾಗಿ ರಶೀದಿ ನೀಡಬೇಕೆಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಸೋಮವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಉಮೇಶ, ‘2026– 27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆಗಾಗಿ ರೈತ ಸಮುದಾಯ ಬೀಜ ಮತ್ತು ಗೊಬ್ಬರವನ್ನು ಅಗ್ರೋ ಸೆಂಟರ್ಗಳಲ್ಲಿ ಖರೀದಿಸಿದ ಸಂದರ್ಭದಲ್ಲಿ ಅಂಗಡಿಗಳಲ್ಲಿ ಖರೀದಿಸುವ ರೈತರಿಗೆ ಅಂಗಡಿಯವರು ರಶೀದಿ ನೀಡದೇ ಕೇವಲ ಬಿಳಿ ಹಾಳಿಯಲ್ಲಿ ಬರೆದು ಕೊಡುತ್ತಿರುವುದು ಸಾಮಾನ್ಯವಾಗಿದೆ. ಇದು ಕಾನೂನು ಬಾಹಿರ. ಆದ್ದರಿಂದ ಅಂಗಡಿಯವರು ತಮ್ಮ ಅಂಗಡಿ ಹೆಸರು ಮತ್ತು ಸೀಲ್ ಹಾಕಿ ಸಹಿ ಮಾಡಿ ಕೊಡಬೇಕು. ಪ್ರತಿ ಅಂಗಡಿಗಳಲ್ಲಿ ಬೀಜ ಮತ್ತು ಗೊಬ್ಬರದ ಮಾಹಿತಿ ಫಲಕ ಹಾಕಬೇಕು’ ಎಂದು ಒತ್ತಾಯಿಸಿದರು.

‘ಗೊಬ್ಬರ ಖರೀದಿ ಮಾಡುವ ರೈತರಿಗೆ ಇಚ್ಛೆ ಇದ್ದರೆ ಮಾತ್ರ ಜಿಂಕ್ ನೀಡಬೇಕು. ಒತ್ತಾಯ ಪೂರ್ವಕವಾಗಿ ಜಿಂಕ್ ನೀಡಬಾರದು. ಅಂಗಡಿಯವರು ತಮ್ಮ ಲಾಭಕ್ಕಾಗಿ ನಮ್ಮ ಪಕ್ಕದ ತಾಲ್ಲೂಕಿನ ರೈತರಿಗೆ ಬೀಜ ಗೊಬ್ಬರ ನೀಡುತ್ತಿರುವುದರಿಂದ ಇಂದು ನಮ್ಮ ರೈತರಿಗೆ ಬೀಜ ಮತ್ತು ಗೊಬ್ಬರ ಸಿಗದ ಪರಿಸ್ಥಿತಿ ಬಂದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಅಂಗಡಿಯವರು ಬೇರೆ ತಾಲ್ಲೂಕಿನ ರೈತರಿಗೆ ಬೀಜ ಮತ್ತು ರಾಸಾಯನಿಕ ಗೊಬ್ಬರ ಮಾರಾಟ ಮಾಡಿದರೆ ಅಂತವರ ಲೈಸೆನ್ಸ್ ರದ್ದು ಮಾಡಲು ಮುಂದಾಗಬೇಕು’ ಎಂದು ಮರ್ಚಪ್ಪನವರ ಆಗ್ರಹಿಸಿದರು.

ಕೃಷಿ ಸಹಾಯಕ ಅಧಿಕಾರಿ ಪ್ರವೀಣ ಪಾಟೀಲ ರೈತರ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಟಿ.ಬಿ. ಶಿರಿಯಪ್ಪಗೌಡ್ರ, ಭರತೇಶ ಬೋಗಾರ, ಎಸ್.ಪಿ. ಶಿರಿಯಪ್ಪಗೌಡ್ರ, ಅನಂತಕುಮಾರ ಭೋಗಾರ, ಬಸಪ್ಪ ಅಳಗವಾಡಿ, ಹೇಮಣ್ಣ ಬೋಗಾರ, ತಿಮ್ಮರೆಡ್ಡಿ ವಾಸನ, ದೇವರಾಜ ನಾಗನೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-23-723065007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.