ನರಗುಂದ: ಮೇ ತಿಂಗಳು ಅರ್ಧ ಗತಿಸಿದರೂ ಬಿರು ಬೇಸಿಗೆ ಛಾಯೆ ಕಡಿಮೆಯಾಗುತ್ತಿಲ್ಲ. ಮಳೆಯ ದರ್ಶನವೂ ಇಲ್ಲ. ಜನಜಾನುವಾರುಗಳು ತತ್ತರಿಸಿವೆ. ಗಿಡಗಳು ಒಣಗುತ್ತಿವೆ. ರೈತರು ಹೊಲ ಹದ ಮಾಡಲು ಆಗುತ್ತಿಲ್ಲ. ಇದರ ನಡುವೆ ಪಟ್ಟಣದ ಅರಣ್ಯ ಇಲಾಖೆಯ ಸಾಮಾಜಿಕ ವಿಭಾಗದ ಸಿಬ್ಬಂದಿ ರಸ್ತೆ ಪಕ್ಕದಲ್ಲಿ ನೆಟ್ಟ ಗಿಡಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಒಂದು ವಾರದಿಂದ ಇಲಾಖೆಯ ಸಿಬ್ಬಂದಿ, ಗಿಡ ಗಳಿಗೆ ಟ್ಯಾಂಕರ್ ಮೂಲಕ ನೀರು ಣಿಸುತ್ತಿದೆ. ಇದರಿಂದ ಗಿಡಗಳಿಗೆ ತುಸು ಜೀವ ಬಂದಂತಾಗಿ ಮತ್ತೆ ನಳನಳಿಸುತ್ತಿವೆ.

ನಿತ್ಯ 250 ಗಿಡಗಳಿಗೆ ನೀರು: ಸುಮಾರು ತಾಲ್ಲೂಕಿನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ತಾಲ್ಲೂಕಿನ ವಿವಿಧ ರಸ್ತೆಗಳ ಎರಡು ಬದಿ ನೆಡಲಾಗಿದೆ. ನಿತ್ಯ 250 ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. 10 ರಿಂದ 15 ಟ್ಯಾಂಕರ್ ನೀರನ್ನು ಇದಕ್ಕಾಗಿ ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ.

ನಿತ್ಯ ಒಂದು ಟ್ಯಾಂಕ್ ನೀರು 25 ರಿಂದ 30 ಗಿಡಗಳಿಗೆ ಸಾಕಾಗುತ್ತದೆ. ಈ ರೀತಿ ಟ್ಯಾಂಕರ್ ನೀರು ಪೂರೈಸಿದರೆ ಮಾತ್ರ ಗಿಡಗಳನ್ನು ರಕ್ಷಿಸಲು ಸಾಧ್ಯ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

ನಿತ್ಯ ₹8 ಸಾವಿರ ವ್ಯಯ: ಟ್ಯಾಂಕರ್ ಮೂಲಕ ನೀರುಣಿಸಲು ಅರಣ್ಯ ಇಲಾಖೆಗೆ ನಿತ್ಯ ₹8 ಸಾವಿರದಿಂದ ₹10 ಸಾವಿರ ಖರ್ಚಾಗುತ್ತಿದೆ. ನರಗುಂದ - ಮದಗುಣಕಿ ರಸ್ತೆ, ಸುರಕೋಡ - ಹದ್ಲಿ ರಸ್ತೆ, ಹುಣಸಿಕಟ್ಟಿ -ಜಗಾಪುರ ರಸ್ತೆ, ಉಪಕಾಲುವೆಗಳ ರಸ್ತೆ ಬದಿಯಲ್ಲಿ ನ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ ಅರಣ್ಯ ಇಲಾಖೆ, ಗಿಡಗಳನ್ನು ಒಣಗದಂತೆ ನೋಡಿಕೊಳ್ಳುತ್ತಿದೆ.

‘ಬೇಸಿಗೆಯಲ್ಲಿ ಗಿಡಗಳ ಪರಿಸ್ಥಿತಿ ಹೇಳತೀರದು. ಆದ್ದರಿಂದ ಒಂದು ವಾರಗಳ ಕಾಲ ಟ್ಯಾಂಕರ್ ಮೂಲಕ ನೀರು ಹಾಕಿ ಅವುಗಳನ್ನು ಸಂರಕ್ಷಿಸಲಾಗಿದೆ. ನಿತ್ಯ 25 ಗಿಡಗಳಿಗೆ ಒಂದು ಟ್ಯಾಂಕರ್ ನೀರು ಬಳಕೆ ಮಾಡಲಾಗಿ, ಒಟ್ಟು ಎರಡು ಟ್ಯಾಂಕರ್ ಮೂಲಕ ನಿತ್ಯ 50 ಗಿಡಗಳಿಗೆ ನೀರುಣಿಸಲಾಗಿದೆ. ಗಿಡಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ನರಗುಂದ ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಸುಮಿತ ಜಕಬಾಳ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-23-2103136843

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.