ನರಗುಂದ: ‘ಇತಿಹಾಸವಿಲ್ಲದೆ ಮುಂದಿನ ನಡೆ ಅಸಾಧ್ಯ. ಹಾಗಾಗಿ, ಇತಿಹಾಸ ವಿಷಯವನ್ನು ಎಲ್ಲರೂ ತಿಳಿಯಬೇಕು. ಸ್ಥಳೀಯ ಇತಿಹಾಸ ಅರಿಯಲು ಮುಂದಾಗಬೇಕು’ ಎಂದು ಹುಬ್ಬಳ್ಳಿ ಪೊಲೀಸ್ ಇಲಾಖೆ ಆರ್ಪಿಐ ನಾಗರಾಜ್ ಪಾಟೀಲ ಹೇಳಿದರು.

ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತಿಹಾಸ ವಿಭಾಗ, ಪ್ರೇರಣಾ ಹಾಗೂ ಪ್ಲೇಸ್ಮೆಂಟ್ ಕೋಶದ ಸಹಭಾಗಿತ್ವದಲ್ಲಿ ಶನಿವಾರ ನಡೆದ ವಿಶ್ವ ಪಾರಂಪರಿಕ ದಿನಾಚರಣೆ ಹಾಗೂ ಹೆರಿಟೇಜ್ ಕ್ಲಬ್ ಉದ್ಘಾಟಿಸಿ ಮಾತನಾಡಿದರು.

‘ಅಂತರರಾಷ್ಟ್ರೀಯ ಇತಿಹಾಸ ತಿಳಿಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಅನುಕೂಲವಾಗುತ್ತದೆ. ಸುದೀರ್ಘ ಅಧ್ಯಯನ, ಶಿಸ್ತುಬದ್ಧ ಅಭ್ಯಾಸದಿಂದ ಇತಿಹಾಸ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಬಹುದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಆನಂದಕುಮಾರ ಲಾಲಸಂಗಿ ಮಾತನಾಡಿ, ‘ಎಲ್ಲ ವಿಷಯಗಳಿಗಿಂತ ಇತಿಹಾಸ ವಿಶೇಷವಾಗಿದೆ’ ಎಂದು ತಿಳಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥೆ ರಾಧ ಎಂ., ಶ್ರೀದೇವಿ, ಯಶೋದ ಅಂಗಡಿ, ಶಬ್ಬೀರ್ ಹಾದಿಮನಿ, ನಂದನ್ ಸಿ., ಎಸ್.ವಿ. ಮನಗುಂಡಿ, ರಾಮು ಎಂ.ಎಸ್., ದುರ್ಗೇಶ್ ಪೂಜಾರಿ, ಭೀಮನಗೌಡ ಕಲಬುರ್ಗಿ, ಮಧು ಜಿ.ರ್., ಗುರುಪಾದಪ್ಪ ಸಿದ್ದಾಪುರ ಇದ್ದರು. ವೀರಣ್ಣ ಕಾರಿಕಾಯಿ ಸ್ವಾಗತಿಸಿದರು. ಅನಿತಾ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-23-274960390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.