ನರಗುಂದ: ‘ಕೈಗಾರಿಕಾ ತರಬೇತುದಾರರಿಗೆ ಶಿಶುಕ್ಷು ತರಬೇತಿ ಕಡ್ಡಾಯವಾಗಿದ್ದು, ಅದನ್ನು ಪೂರ್ಣಗೊಳಿಸಬೇಕು’ ಎಂದು ಗದಗನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಬಸವರಾಜ ಮಲ್ಲೂರ ಹೇಳಿದರು.

ತಾಲ್ಲೂಕಿನ ಶಿರೋಳದ ತೋಂಟದಾರ್ಯ ವಿದ್ಯಾಪೀಠದ, ಶಿರೋಳ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ಬೆಂಗಳೂರಿನ ದ್ವೀಚಕ್ರ ವಾಹನ ಬಿಡಿಭಾಗಗಳ ತಯಾರಕ ಸನ್ಸೇರಾ ಕಂಪನಿ ಆಶ್ರಯದಲ್ಲಿ ನಡೆದ ಶಿಶುಕ್ಷು ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಭಾಗೀಯ ಕಚೇರಿಯಿಂದ ಪ್ರತಿವಾರ ನಡೆಸುವ ಅಪ್ರೆಂಟಿಸ್ ತರಬೇತಿ ಕುರಿತು ಅರಿವು ಮೂಡಿಸುವ ಸಲುವಾಗಿ ಗೂಗಲ್ ಮೀಟ್ ಏರ್ಪಡಿಸಲಾಗುತ್ತದೆ. ಇದರಲ್ಲಿ ಎಲ್ಲ ತರಬೇತುದಾರರು ಕಡ್ಡಾಯವಾಗಿ ಭಾಗಿಯಾಗಿ ಶಿಶುಕ್ಷು ತರಬೇತಿ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.

ಸನ್ಸೇರಾ ಕಂಪೆನಿ ಸಂಪನ್ಮೂಲ ಅಧಿಕಾರಿ ಸುನೀಲ್ ಶೆಟ್ಟಿ ಮತ್ತು ಜಗದೀಶ ಎಸ್. ತರಬೇತುದಾರರಿಗೆ ಶಿಶುಕ್ಷು ಸಂದರ್ಶನ ಮಾಡಿದರು.

ಸುರೇಬಾನದ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಆನಂದ ಗಡೇದೆ 14 ತರಬೇತುದಾರರೊಂದಿಗೆ ಭಾಗವಹಿಸಿದ್ದರು. ಶಿರೋಳದಿಂದ 64 ತರಬೇತುದಾರರು ಸೇರಿದಂತೆ ಒಟ್ಟು 84 ತರಬೇತುದಾರರು ಸಂದರ್ಶನ ಎದುರಿಸಿದರು. 63 ತರಬೇತುದಾರರನ್ನು ಶಿಶುಕ್ಷು ತರಬೇತಿಗೆ ಆಯ್ಕೆ ಮಾಡಲಾಯಿತು.

ಪ್ಲೇಸ್ಮೆಂಟ್ ಅಧಿಕಾರಿ ಎಸ್.ವಿ. ಕುಪ್ಪಸ್ತ, ಶ್ರೀಧರ ಬೇವಿನಕಟ್ಟಿ, ವೀರನಗೌಡ, ಪ್ರಭುಲಿಂಗ ಶಿರಿಯಣ್ಣವರ, ಭೂಪತಿ ಧೋತರದ, ಪ್ರೀತಿ ಚಿಕ್ಕಮಠ, ಕಾಳಮ್ಮ ಕಮ್ಮಾರ, ಚಂದ್ರಕಾಂತ ಕಾಡದೇವರಮಠ, ಗಂಗಾಧರ ಫಾರಗೆ ಇದ್ದರು. ಪ್ರಾಚಾರ್ಯ ಬಸವರಾಜ ಸಾಲಿಮಠ ಮಾತನಾಡಿದರು. ಎಸ್.ಬಿ. ಗೊರವರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-23-1013894272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.