ನರಗುಂದದ: ಪಟ್ಟಣದ ಮಾರುಕಟ್ಟಿಯಲ್ಲಿ ಸೂರ್ಯಕಾಂತಿ ಬೆಲೆ ದಿಢೀರ್ ಕುಸಿತವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆದ್ದು ಬೇಗನೇ ಸರ್ಕಾರ ಸೂರ್ಯ ಕಾಂತಿ ಖರೀದಿಗೆ ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು ಗುರುವಾರ ತಹಶೀಲ್ದಾರ್ ಶ್ರೀಶೈಲ ತಳವಾರ ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ್. ಸೂರ್ಯಕಾಂತಿ ಖರೀದಿ ಮಾಡಲು ಬೆಂಬಲ ಬೆಲೆ ಕೇಂದ್ರ ಪ್ರಾರಂಭಸಬೇಕು. ಮಲಪ್ರಭಾ ಜಲಾಶಯದ ನೀರಾವರಿ ಕಾಲುವೆಗೆಳಗೆ ಹೊಂದಿರುವ ಜಮೀನಗಳಲ್ಲಿ ರೈತರು ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆ ಸೂರ್ಯಕಾಂತಿ ಬೆಳೆಯಲು 1 ಎಕರೆಗೆ ₹ 20 ರಿಂದ ₹ 30ಸಾವಿರ ಖರ್ಚು ಮಾಡಿ ಉತ್ತಮ ಬೆಳೆ ಬೆಳೆದಿದ್ದಾರೆ. 8 ರಿಂದ10 ಕ್ವಿಂಟಲ್ ಇಳುವರಿಯೂ ಬಂದಿದೆ. ಆದರೆ ಮೊದಲಿದ್ದ ಬೆಲೆ ₹ 7 ಸಾವಿರದಿಂದ₹ 7500 . ಆ ಬೆಲೆ ಈಗ ₹ 6300ಕ್ಕೆ ಕುಸಿದಿದೆ.

ಈ ಬೆಲೆ ರೈತರಿಗೆ ನಷ್ಟ ತರುತ್ತಿದೆ.ಆದ್ದರಿಂದ ಸರ್ಕಾರ ಸೂರ್ಯಕಾಂತಿಯನ್ನು ₹7771 ಬೆಲೆಯಡಿ ಖರೀದಿ ಮಾಡಲು ಮುಂದಾಗಬೇಕು. ಬೇಗನೆ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ವಾಗುತ್ತದೆ ಎಂದು ಮರ್ಚಪ್ಪನವರ ಎಚ್ಚರಿಸಿದರು. ಈ ಸಂದರ್ಭದಲ್ಲಿ ವೆಂಕಪ್ಪ ಹೂಲಿ, ಜಮಲಾಸಾಬ ಕೆರೂರ, ಸಂತೋಷ ಖಾನಾಪುರ, ಸುರೇಶ ಐನಾಪೂರ, ಗುರುಶಾಂತ ನರಸಾಪೂರ, ಮುತ್ತಪ್ಪ ಬದಾಮಿ ಇದ್ದರು.

ಹುಬ್ಬಳ್ಳಿ: ಮನೆ ಎದುರು ಗಲಾಟೆ ಮಾಡಿ, ಮಹಿಳೆಯ ಕೈ ಹಿಡಿದು ಎಳೆಯಲು ಯತ್ನಿಸಿದ ಆರೋಪದಡಿ ಗಿರೀಶ ಗದಿಗೆಪ್ಪಗೌಡರ ಸೇರಿ ಎಂಟು ಮಂದಿ ವಿರುದ್ಧ ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-23-1856635296

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.