ನರಗುಂದ: ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು, ರಾತ್ರಿ ವೇಳೆಯಲ್ಲಿ ಬೆವರು ಬರುವುದು ಕ್ಷಯರೋಗದ ಪ್ರಮುಖ ಲಕ್ಷಣಗಳಾಗಿವೆ. ಇಂತಹವರನ್ನು ಗುರುತಿಸಿ ಕಫ ಹಾಗೂ ಇತರೆ ಪರೀಕ್ಷೆ ಮಾಡಿಸಬೇಕು. ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ಹೇಳಿದರು.

ಪಟ್ಟಣದ ಆರೋಗ್ಯ ಇಲಾಖೆ ಆಶ್ರಯದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗ ಖಚಿತವಾದಲ್ಲಿ 6 ತಿಂಗಳ ಉಚಿತ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಕಫ, ಕಫದಲ್ಲಿ ರಕ್ತ, ಸಂಜೆ ವೇಳೆ ಜ್ವರ ಬರುವುದು, ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು ಸೇರಿದಂತೆ ಇನ್ನೂ ಕೆಲವು ಲಕ್ಸಣಗಳಿವೆ. ಈ ಲಕ್ಷಣ ಕಂಡು ಬಂದಲ್ಲಿ ಕೂಡಲೇ ತಾಲ್ಲೂಕು ಆಸ್ಪತ್ರೆ ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಬೇಕು ಎಂದು ಹೇಳಿದರು.

ಡಾ.ಜಗದೀಶ ಮಹಾಜನಶೆಟ್ಟರ್, ಎಸ್.ಆರ್.ದೇಸಾಯಿ, ಡಾ.ಸಿ.ಆರ್.ಜಾಲಿಕೋಪ್ಪ, ಶಿವಾನಂದ ಕುರಹಟ್ಟಿ, ಐ.ಆರ್.ಗಂಜಿ, ಮಲ್ಲಿಕಾರ್ಜುನ ಹಿರೇಮಠ, ಎಂ.ಪಿ.ಶಿಗ್ಗಾಂವಕರ, ವಾಸಂತಿ ಕದಂಬ, ಅಕಿಬ್ಜಾವೇದ್ ಹುಲ್ಲೂರು, ನಾಗರಾಜ ಹೊಸಮನಿ, ವಿಕ್ರಮ ಬಸರಡ್ಡಿ, ಮಹಾಂತೆಶ ಪಲ್ಲೇದ, ಬಾಬಣ್ಣ ಹಿರೆಹೋಳಿ, ಟಿ ಬಿ ಶಿರಿಯಪ್ಪಗೌಡ್ರ, ಉಮೇಶ ಮರ್ಚಪ್ಪನವರ, ಎಂ.ಬಿ.ಅರಹುಣಸಿ, ಶಿವಾನಂದ ಕುರಹಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-23-1839929569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.