ನರಗುಂದ: ‘ತಾಲ್ಲೂಕಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಪರಿಹರಿಸಲು ಮುಂದಾಗಬೇಕು. ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸಿ ಮಾಹಿತಿ ನೀಡಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ನರಗುಂದ ಮತಕ್ಷೇತ್ರದ ರೋಣ, ನರಗುಂದ, ಗದಗ ತಾಲ್ಲೂಕುಗಳ ಅಧಿಕಾರಿಗಳ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.

ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಪರಿಸ್ಥಿತಿ ಮತ್ತು ಬಿಸಿಲಿನ ತಾಪದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಮುಂಗಾರು ವಿಳಂಬವಾಗುತ್ತಿರುವ ಬಗ್ಗೆ ಹವಾಮಾನ ಇಲಾಖೆ ವರದಿ ಅನ್ವಯ ಸಭೆ ಕರೆಯಲಾಗಿದೆ. ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಬೇಕು ಎಂದು ಮೂರೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕ ಸಿ.ಸಿ.ಪಾಟೀಲ ಸೂಚಿಸಿದರು.

ನೀರಿನ ಸಮಸ್ಯೆ ಕುರಿತು ವಿವರಿಸಿದ ಡಿಬಿಒಟಿ ಎಂಜನೀಯರ್ ದೇವರಾಜ ದೇಸಾಯಿ, ‘ನರಗುಂದ, ರೋಣ ತಾಲ್ಲೂಕುಗಳ ಹಳ್ಳಿಗಳಿಗೆ ಜೆಜೆಎಂ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲ ಸಮಯ ವಿದ್ಯುತ್ ತೊಂದರೆಯಿಂದ ವಿಳಂಬವಾಗಿತ್ತು’ ಎಂದು ಸಭೆಗೆ ತಿಳಿಸಿದರು. ಆಗ ಮಧ್ಯಪ್ರವೇಶಿಸಿದ ಶಾಸಕ ಪಾಟೀಲ, ‘ಈ ಬಗೆ ನವಿಲುತೀರ್ಥ ಜಲಾಶಯದ ಹೆಸ್ಕಾಂ ಎಇಇ, ಡಿಬಿಒಟಿ ಮತ್ತು ಹೆಸ್ಕಾಂ ಅಧಿಕಾರಿಗಳು ಒಂದೆಡೆ ಕುಳಿತು ಸಮಸ್ಯೆ ಪರಿಹರಿಸಿ ಸಕಾಲಕ್ಕೆ ನೀರು ಪೂರೈಸಬೇಕು’ ಎಂದು ಸೂಚಿಸಿದರು.

ಮುಂಗಾರು ಅವಧಿಯಲ್ಲಿ ಜೋರಾಗಿ ಬೀಸಿದ ಗಾಳಿಯಿಂದ ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದರೆ, ಮತ್ತೊಂದೆಡೆ ವಾಲಿ ನಿಂತಿವೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಹೆಸ್ಕಾಂ ಅಧಿಕಾರಿಳು ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯಿಂದ ಗೊಬ್ಬರ ಉತ್ಪಾದನೆಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯ ಯೂರಿಯಾ, ಡಿಎಪಿ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾದರೆ ರೈತರ ಮನವೊಲಿಸಿ ಸಮಸ್ಯೆ ಪರಿಹರಿಸಬೇಕು. ಗೊಬ್ಬರ ಜತೆ ಕಡ್ಡಾಯ ಲಿಂಕ್ ವಿತರಣೆ ಮೇಲೆ ನಿಗಾವಹಿಸಿ, ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಆಗದಂತೆ ನೋಡಿಕೊಳ್ಳುವಲ್ಲಿ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಮೇವಿನ ಕೊರತೆ ನೀಗಿಸಿ: ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಕೇವಲ 15-20 ದಿನಗಳಲ್ಲಿ ಬೀಜ ಬಿತ್ತನೆ ಮಾಡಿದರೆ ಜಾನುವಾರುಗಳಿಗೆ ಹುಲ್ಲು ಬೆಳೆಸುವ ಬೀಜ ಕಂಡು ಕೊಂಡಿದ್ದಾರೆ. ಒಂದು ಬಾರಿ ಅಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುವ ಮೂಲಕ ಅಂತಹ ಬೀಜಗಳನ್ನು ತಂದು ಬಿತ್ತನೆ ಮಾಡಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವಲ್ಲಿ ರೈತರ ಮನವೊಲಿಸಲು ಪಶು ವೈದ್ಯಾಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಪಾಟೀಲ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ ಶ್ರೀಶೈಲ ತಳವಾರ, ತಾಲ್ಲೂಕು ಪಂಚಾಯತ ಇಒ ಶ್ರೀಧರ ಚಿನಗುಂಡಿ, ರೋಣ ತಹಶೀಲ್ದಾರ ನಾಗರಾಜ ಕೆ, ಗದಗ ತಹಶೀಲ್ದಾರ ಡಾ.ಹುಲಗಣ್ಣವರ, ಶ್ರೀನಿವಾಸಮೂರ್ತಿ, ಗದಗ ಇಓ ಜನಗಿ, ಎಸ್.ಸಿ.ಪಾಟೀಲ, ಚಂದ್ರಶೇಖರ ಕಂದಕೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-1384425279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.