ನರಗುಂದ: ತಾಲ್ಲೂಕಿನ ರಡ್ಡೆರ ನಾಗನೂರನಲ್ಲಿ ಪತ್ನಿಯೇ ಮನೆಯಲ್ಲಿ ಪತಿಗೆ ಕಬ್ಬಿಣದ ಹಾರಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಬುಧವಾರ ನಡೆದಿದೆ.

ರಡ್ಡೇರನಾಗನೂರನ ವಿಶ್ವನಾಥ ಶ್ರೀಶೈಲಪ್ಪ ಹಾದಿಮನಿ (28) ಕೊಲೆಯಾದ ವ್ಯಕ್ತಿ. ಪತ್ನಿ ಶ್ವೇತಾ ವಿಶ್ವನಾಥ ಹಾದಿಮನಿ ಕೊಲೆ ಆರೋಪಿ.

ಪತ್ನಿ ಶ್ವೇತಾ ವಿಶ್ವನಾಥ ಹಾದಿಮನಿ ಕೌಟುಂಬಿಕ ಕಲಹ ಕಾರಣವೊಡ್ಡಿ ಪದೇ ಪದೇ ತವರು ಮನೆಗೆ ಹೋಗಿ ಬರುತ್ತಿದ್ದಳು. ಮೂರು ವರ್ಷದ ಹಿಂದೆ ತವರು ಮನೆಗೆ ತೆರಳಿದ್ದ ಶ್ವೇತಾ ಈಚೆಗೆ ಪತಿಯ ಸಹೋದರಿ ಮದುವೆಗಾಗಿ ಗಂಡನ ಮನೆಗೆ ಬಂದಿದ್ದಳು. ಒಂದು ವಾರ ಗಂಡನ ಮನೆಯಲ್ಲಿ ಇದ್ದು ಮತ್ತೆ ತವರಿಗೆ ತೆರಳಿದ್ದಳು. ಸೋಮವಾರ ಮರಳಿ ಬಂದಿದ್ದಳು. ಬುಧವಾರ ಬೆಳಿಗ್ಗೆ ಪತಿಯನ್ನು ಕೊಲೆ ಮಾಡಿರುವುದಾಗಿ ಮೃತನ ತಾಯಿ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-23-180684385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.