ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇಕಾರನ ಉತ್ಪನ್ನಕ್ಕೆ ಬೆಲೆ ಇಲ್ಲ: ದಶರಥ ಕೊಳ್ಳಿ

ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಶರಥ ಕೊಳ್ಳಿ ವಿಷಾದ
Published 11 ಆಗಸ್ಟ್ 2024, 16:01 IST
Last Updated 11 ಆಗಸ್ಟ್ 2024, 16:01 IST
ಅಕ್ಷರ ಗಾತ್ರ

ಗದಗ: ‘ನೇಕಾರಿಕೆ ವೃತ್ತಿಗೆ ಸರ್ಕಾರದಿಂದ ಯಾವುದೇ ಸವಲತ್ತುಗಳು ದೊರೆಯದ ಕಾರಣ, ಸಮಾಜದ ಯುವಕರು ಬೇರೆ ಉದ್ಯೋಗಗಳತ್ತ ವಾಲುತ್ತಿದ್ದಾರೆ. ನೇಕಾರಿಕೆಯಿಂದ ಆರ್ಥಿಕ ಲಾಭ ಇಲ್ಲವಾಗಿದೆ. ಜತೆಗೆ ಸಮಾಜಿಕವಾಗಿ ಸಹಿತ ನೇಕಾರನಿಗೆ ಬೆಲೆ ಇಲ್ಲವಾಗಿದೆ’ ಎಂದು ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಶರಥ ಕೊಳ್ಳಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ದೇವಾಂಗ ಸಂಘ ಹಾಗೂ ದೇವಾಂಗ ಸಮಾಜದ ವತಿಯಿಂದ ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಹಿರಿಯ ನೇಕಾರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ದೇವಾಂಗ ಸಮಾಜ ಹಿಂದಿನಿಂದಲೂ ನೇಕಾರಿಕೆಯನ್ನು ಕುಲಕಸಬನ್ನಾಗಿ ಆಯ್ಕೆ ಮಾಡಿಕೊಂಡು ವಸ್ತ್ರಗಳನ್ನು ತಯಾರಿಸುತ್ತ ಬಂದಿದೆ. ದೇವಾಂಗ ಮಹರ್ಷಿ ಕುಲ ಸಂಜಾತರೆಂದು ಹೆಮ್ಮೆ ಪಡುತ್ತಿದ್ದ ನೇಕಾರನಿಗೆ ಈಗಿನ ಪರಿಸ್ಥಿತಿಯಲ್ಲಿ ಕನ್ಯೆ ಸಿಗುವುದು ದುರ್ಲಭವಾಗಿದೆ. ಸರ್ಕಾರದ ನೀತಿಯಿಂದಾಗಿ ನೇಕಾರನ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ನೇಕಾರಿಕೆ ಹಂತ ಹಂತವಾಗಿ ಕಣ್ಮರೆಯಾಗುವ ಪರಿಸ್ಥಿತಿಗೆ ಬಂದು ತಲುಪಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ನೇಕಾರರಾದ ಈಶ್ವರಪ್ಪ, ಶಾರದಾ, ಆನಂದಪ್ಪ, ನಿರ್ಮಲಾಬಾಯಿ ಸಕ್ರಿ, ತುಳಸವ್ವ ನಂದರಗಿ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಅಶೋಕ ಬಣ್ಣದ, ಮಲ್ಲಿಕಾರ್ಜುನ ಬೆಲ್ಲದ, ಶ್ರೀನಿವಾಸ ಹುಬ್ಬಳ್ಳಿ, ಅನಿಲ ಗಡ್ಡಿ, ರಾಮಚಂದ್ರ ಹುಬ್ಬಳ್ಳಿ, ಅಶೋಕ ಹೊನ್ನಳ್ಳಿ, ಪ್ರಭು ನೀಲಗುಂದ, ರಾಜು ಕೊಚಿ, ಸುಭಾಷ್ ಗಂಜಿ, ವಿಶ್ವನಾಥ್ ವನಕಿ, ಭಾರತಿ ಗಡ್ಡಿ, ವಸಂತ್, ಬಸವರಾಜ ಕಂಪ್ಲಿ, ಪ್ರಕಾಶ ಹತ್ತಿಕಾಳ, ದೇವಾಂಗ ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತಾ ಕಾಖಂಡಕಿ, ಬನ್ನಪ್ಪ, ನಾಗರಾಜ್ ಬಣ್ಣದ, ನವೀನ್ ಮೇಡಿ, ನಾರಾಯಣಪ್ಪ ಜನಿವಾರದ, ರಾಘವೇಂದ್ರ ನೀಲಗುಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT