ನೋವು, ನಲಿವು ಸಮಚಿತ್ತದಿಂದ ಸ್ವೀಕರಿಸಿ: ಸಾಹಿತಿ ಡಿ.ವಿ. ಬಡಿಗೇರ

ಶುಕ್ರವಾರ, ಏಪ್ರಿಲ್ 26, 2019
21 °C
ಯುಗಾದಿ ಕವಿಗೋಷ್ಠಿ

ನೋವು, ನಲಿವು ಸಮಚಿತ್ತದಿಂದ ಸ್ವೀಕರಿಸಿ: ಸಾಹಿತಿ ಡಿ.ವಿ. ಬಡಿಗೇರ

Published:
Updated:
Prajavani

ಗದಗ: ‘ನೋವು, ನಲಿವು ಎರಡನ್ನು ಸಮಾನ ಚಿತ್ತದಿಂದ ಸ್ವೀಕರಿಸಿ ಬಾಳುವುದೇ ನಿಜವಾದ ಜೀವನ ಧರ್ಮವಾಗಿದ್ದು, ಯುಗಾದಿ ಹಬ್ಬ ಬದುಕಿನ ಮೌಲ್ಯಗಳನ್ನು ತಿಳಿಸುತ್ತದೆ’ ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.

ಸ್ಥಳೀಯ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ನಿರಂತರ ಪ್ರಕಾಶನ ಹಾಗೂ ಚಿತ್ರಾ ಪ್ರಕಾಶನ ಆಶ್ರಯದಲ್ಲಿ ಭಾನುವಾರ ನಡೆದ ಯುಗಾದಿ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಷ್ಟಗಳನ್ನು ಎದುರಿಸಿ ಬಾಳುವುದೇ ನಿಜವಾದ ಜೀವನದ ಕಲೆಯಾಗಿದೆ. ಇದರಿಂದ ವಿಮುಖರಾಗಿ ಕೇವಲ ಐಶಾರಾಮಿ ಜೀವನ ನಡೆಸುವುದು ಸಮರ್ಥನೀಯವಲ್ಲ’ ಎಂದರು.

ಮಂಗಳಗೌರಿ ಹಿರೇಮಠ ಅವರು ಬರೆದ ಭಾವಜೀವ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ವಕೀಲ ಮನೋಹರ ಮೇರವಾಡೆ, ಸಾಹಿತಿ ಬಿ.ಎಸ್. ಹಿಂಡಿ, ಗುರು ಕಲ್ಮಠ, ಎ.ಎಸ್. ಮಕಾನದಾರ, ಕಲಾವತಿ ಹವಳದ, ನಾಮದೇವ ಕಾಗದಗಾರ, ಅಜಿತ್ ಘೋರ್ಪಡೆ, ಎನ್.ಎಂ. ಕಿಂದ್ರಿ, ಡಿ.ಬಿ. ನಾಯಕ, ಬಿ.ಎಸ್. ಹಿಂಡಿ, ಅನಸೂಯಾ ಮಿಟ್ಟಿ, ಲಾಡಮಾ ನದಾಫ್ ಇದ್ದರು.

ಮಂಜುಳಾ ವೆಂಕಟೇಶಯ್ಯ, ಡಾ.ವಾಮನ್ ಕುಲಕರ್ಣಿ, ವೈ.ವೈ. ಅಂಬಿಗೇರ, ಮಂಗಳಗೌರಿ ಹಿರೇಮಠ, ಎಂ.ಎಸ್. ಹಿರೇಮಠ, ಶಿಲ್ಪಾ ಮ್ಯಾಗೇರಿ, ಸಿ.ಎಂ. ಪಾಟೀಲ, ಆರ್.ಡಿ. ಕಪ್ಪಲಿ, ಈಶ್ವರ ಕುರಿ, ನೀಲಮ್ಮ ಅಂಗಡಿ, ಹಾಶಿಫ್ ನಮಾಜಿ, ವಿ.ಎಂ. ಪವಾಡಿಗೌಡರ, ವಿಜಯಲಕ್ಷ್ಮಿ ಅಕ್ಕಿ, ಶೋಭಾ ಪಿಡ್ಡಿ, ಲಿಂಗನಗೌಡ ಪಾಟೀಲ, ಅನಸೂಯಾ ಮಿಟ್ಟಿ, ಮಂಜುನಾಥ ಡೋಣಿ, ರಾಮಚಂದ್ರ ನಾಡಗೇರ, ಪಂಚಯ್ಯ ಹಿರೇಮಠ, ಚೋಸಿವಿ ಹುಯಿಲಗೋಳ, ಶಿವಾನಂದ ಗಡಾದ, ಎ.ಎಸ್. ನದಾಫ್, ಜೆ.ಎ. ಪಾಟೀಲ, ಸಂಗಮೇಶ ಹಾದಿಮನಿ, ರತ್ನಕ್ಕ ಪಾಟೀಲ ಅವರು ವಸಂತ ವೈಭವ ಹಾಗೂ ಯುಗಾದಿ ಕುರಿತು ಕವನ ವಾಚನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !