ಸಂಸತ್‌ ಚಲೋ ಸೆ. 5ರಂದು: ವರಲಕ್ಷ್ಮಿ

7

ಸಂಸತ್‌ ಚಲೋ ಸೆ. 5ರಂದು: ವರಲಕ್ಷ್ಮಿ

Published:
Updated:
Deccan Herald

ಗದಗ: ‘ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ಹಾಗೂ ಕಾರ್ಮಿಕರಿಗೆ ಕನಿಷ್ಟ ₹ 18 ಸಾವಿರ ವೇತನ ನಿಗದಿಪಡಿಸಲು ಆಗ್ರಹಿಸಲು ಸೆ. 5ರಂದು ಸಂಸತ್‌ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 2.5 ಲಕ್ಷ ಜನರು ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಟ ವೇತನ ಜಾರಿಗೊಳಿಸಿ, ಉದ್ಯೋಗ ಭದ್ರತೆ ಒದಗಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಭವಿಷ್ಯನಿಧಿ, ಪಿಂಚಣಿ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರದ ಗಮನ ಸೆಳೆಯಲು, ಸಂಸತ್‌ ಚಲೋಗೆ ಮುನ್ನ ರಾಜ್ಯದಾದ್ಯಂತ ಎರಡು ಹಂತದಲ್ಲಿ ಹೋರಾಟ ನಡೆಯಲಿದೆ. ಆ. 9ರಂದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜೈಲ್ ಭರೋ ಚಳವಳಿ ಹಾಗೂ ಆ. 14ರಂದು ಸಾಮೂಹಿಕ ಸತ್ಯಾಗ್ರಹ ನಡೆಯಲಿದೆ’ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಮಾರುತಿ ಚಿಟಗಿ, ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಜಿಲ್ಲಾಧ್ಯಕ್ಷೆ ಯಶೋಧಾ ಬೆಟಗೇರಿ, ಕವಿತಾ ಬಡಿಗೇರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !