ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ತಿಂಗಳಿಂದ ಲಭಿಸದ ವೇತನ: ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ

ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ
Last Updated 22 ಮೇ 2019, 12:10 IST
ಅಕ್ಷರ ಗಾತ್ರ

ಗದಗ: ‘ಕಳೆದ ಏಳು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿಸುವಂತೆ ಆಗ್ರಹಿಸಿ, ಪೌರಕಾರ್ಮಿಕರು ಬಧವಾರ ಇಲ್ಲಿ, ನಗರಸಭೆ ಪ್ರವೇಶದ್ವಾರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

‘ಆರೇಳು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಜೀವನ ನಿರ್ವಹಣೆ ದುಸ್ಥರವಾಗಿದೆ. ನಗರಾಡಳಿತ ಇದೇ ಧೋರಣೆ ಮುಂದುವರಿಸಿದರೆ ಆತ್ಮಹತ್ಯೆ ಅಲ್ಲದೇ ಬೇರೆ ದಾರಿ ಇಲ್ಲ’ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಪೌರಾಯುಕ್ತ ದೀಪಕ್ ಹರಡೆ ಅವರು ಪೌರಕಾರ್ಮಿಕರಿಂದ ಮನವಿ ಸ್ವೀಕರಿಸಿದರು. ‘ತಾಂತ್ರಿಕ ತೊಂದರೆ ಹಾಗೂ ನಗರಸಭೆ ಸಿಬ್ಬಂದಿಯೊಬ್ಬರ ನಿರ್ಲಕ್ಷ್ಯದಿಂದ ವೇತನ ಬಿಡುಗಡೆ ವಿಳಂಬವಾಗಿದೆ. 3-4 ದಿನಗಳಲ್ಲಿ ಪೌರಕಾರ್ಮಿಕರ ನಾಲ್ಕು ತಿಂಗಳ ವೇತನ ಬಿಡುಗಡೆ ಮಾಡಲಾಗುವುದು.ತಾಂತ್ರಿಕ ಸಮಸ್ಯೆ ಇತ್ಯರ್ಥಗೊಂಡ ಬಳಿಕ, ಇನ್ನುಳಿದ ವೇತನವನ್ನು ಸಂಪೂರ್ಣವಾಗಿ ನೀಡಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪೌರಕಾರ್ಮಿಕರು ಪ್ರತಿಭಟನೆಯಿಂದ ಹಿಂದೆ ಪಡೆದರು.

ನಿರ್ಲಕ್ಷ್ಯ ತೋರಿದ ನಗರಸಭೆ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಪೌರಾಯುಕ್ತರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ರಾಮಗಿರಿ, ಎಸ್.ಪಿ. ಬಳ್ಳಾರಿ, ನಾಗೇಶ ಬಳ್ಳಾರಿ, ಹೇಮೇಶ ಯಟ್ಟಿ, ಚಂದ್ರಶೇಖರ ಆರ್. ಹಾದಿಮನಿ, ವೆಂಕಟೇಶ ಬಳ್ಳಾರಿ, ಕೆಂಚಪ್ಪ ಪೂಜಾರ, ಅರವಿಂದ ಕುರ್ತಕೋಟಿ, ಯಲ್ಲಪ್ಪ ರಾಮಗಿರಿ, ಅನಿಲ ಕಾಳೆ, ಪರಶು ಕಾಳೆ, ಮುತ್ತು ಬಿಳೆಯಲಿ, ಲಕ್ಷ್ಮಣ ಕೊಟ್ನಿಕಲ್, ಆಂಜನೇಯ ಪೂಜಾರ, ರಮೇಶ ಬಾರಕೇರ, ಅಣ್ಣಪ್ಪ ಜಂಬಲದಿನ್ನಿ, ವಿಶ್ವನಾಥ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT