ಗದಗ: ‘ಪ್ರತಿ ಮಗು ಕೂಡ ವಿಶೇಷ, ಶಕ್ತಿ ಸಾಮರ್ಥ್ಯ ಹೊಂದಿರುತ್ತದೆ. ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ’ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಹೇಳಿದರು.

ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ‘ಪ್ರಶಸ್ತ ಆ್ಯಪ್ 2.0’ ಅನುಷ್ಠಾನ ಕುರಿತು ಗದಗ ಶಹರ ಹಾಗೂ ಗದಗ ಗ್ರಾಮೀಣ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗಾಗಿ ನಗರದ ಬ್ರೈಟ್ ಹಾರಿಜನ್ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಕರು ಅಂಗವಿಕಲ ಮಕ್ಕಳಲ್ಲಿ ಸಕಾರಾತ್ಮಕ ಧೋರಣೆ ಬೆಳೆಸಬೇಕು. ಪೋಷಕರನ್ನು ಆಶಾವಾದಿಗಳನ್ನಾಗಿ ಮಾಡಬೇಕು. ವಿಶೇಷ ಮಕ್ಕಳಿಗಾಗಿ ಇರುವ ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ತಲುಪಿಸಿ ಶೈಕ್ಷಣಿಕ, ಸಾಮಾಜಿಕ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರಶಸ್ತ ಆ್ಯಪ್ ಸಹಕಾರಿಯಾಗಿದೆ’ ಎಂದರು.

ಗದಗ ಗ್ರಾಮೀಣ ಕ್ಷೇತ್ರ ಸಮನ್ವಯ ಅಧಿಕಾರಿ ಜೆ.ಎ.ಬಾವಿಕಟ್ಟಿ ಮಾತನಾಡಿ, ಸಮುದಾಯವು ವಿಶೇಷ ಮಕ್ಕಳ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಕರೊಂದಿಗೆ ಪಾಲಕರು, ಸಮುದಾಯ ಕೈಜೋಡಿಸಿ ಈ ಮಕ್ಕಳ ಏಳಿಗೆಗಾಗಿ ಇರುವ ಹಲವಾರು ಯೋಜನೆಗಳನ್ನು ತಿಳಿದು ಅನುಸರಿಸಿ, ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಎಚ್.ಗದಗ ಮಾತನಾಡಿ, ‘ಬದಲಾದ ಕಾಲಮಾನಗಳಲ್ಲಿ ತಾಂತ್ರಿಕತೆಯು ಅತ್ಯಂತ ಅವಶ್ಯವಾಗಿದೆ. ಬೋಧನಾ ಕೌಶಲಗಳಲ್ಲಿ ಹೊಸ ನಾವೀನ್ಯತೆ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಕ ಸಮುದಾಯವು ಅಂಗವಿಕಲ ಮಕ್ಕಳಿಗೆ ಸಹಕಾರಿ ಆಗಲಿ’ ಎಂದರು.

ಸಂಪನ್ಮೂಲ ವ್ಯಕ್ತಿ ಜಿ.ಡಿ.ಮುಳಗುಂದ ‘ಪ್ರಶಸ್ತ ಆ್ಯಪ್ 2.0’ ಕುರಿತು ಮಾಹಿತಿ ನೀಡಿದರು.

ಎಸ್.ಎನ್.ಸ್ಥಾವರಮಠ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಎಸ್.ಬಿ.ದೊಡ್ಡಣ್ಣವರ ಸ್ವಾಗತಿಸಿದರು. ಎಂ.ಐ.ಮುಗಳಿ ನಿರೂಪಿಸಿದರು. ಎಚ್.ಎಸ್.ಮಂಗಳೂರು ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಕೆ.ಎಸ್.ಬೇಲೇರಿ, ಈ.ಡಿ.ಹುಗ್ಗೇನವರ, ಎಸ್.ವಿ.ಚಳಗೇರಿ ಸೇರಿದಂತೆ ಗದಗ ಶಹರ ಹಾಗೂ ಗದಗ ಗ್ರಾಮೀಣ ವಲಯದ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.

‘ಪ್ರಶಸ್ತ ಆ್ಯಪ್ 2.0’ ಪರಿಣಾಮಕಾರಿ: ಅರವಟಗಿ ‘ಜ್ಞಾನ ಆಧಾರಿತ ಜಾಗತಿಕ ಸಮುದಾಯವು ಒಡ್ಡುವ ಹಲವಾರು ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದಲ್ಲಿ ಅನೇಕ ಬದಲಾವಣೆಗಳು ಅನಿವಾರ್ಯವಾಗಿವೆ’ ಎಂದು ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ತರಬೇತಿಯ ನೋಡಲ್ ಅಧಿಕಾರಿ ಬಿ.ಎಫ್.ಅರವಟಗಿ ಹೇಳಿದರು. ‘ನ್ಯೂನತೆವುಳ್ಳ ಮಕ್ಕಳು ಈ ರಾಷ್ಟ್ರದ ಉಪಯುಕ್ತ ನಾಗರಿಕರಾಗಲು ಅವರಿಗೆ ಬೇಕಾದ ಸಮಾನ ಅವಕಾಶ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿದ್ದು ಇದೀಗ ‘ಪ್ರಶಸ್ತ ಆ್ಯಪ್ 2.0’ ಇನ್ನಷ್ಟು ಸಹಕಾರಿ ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.