ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಾ ಬಂಧನ: ಬಾಂಧವ್ಯ ಬೆಸೆದ ರಾಖಿ

ನವ ವಿನ್ಯಾಸದ 100ಕ್ಕೂ ಹೆಚ್ಚು ಪ್ರಕಾರದ ರಾಖಿಗಳ ಮಾರಾಟ
Last Updated 22 ಆಗಸ್ಟ್ 2021, 15:19 IST
ಅಕ್ಷರ ಗಾತ್ರ

ಗದಗ: ಅಣ್ಣ ತಂಗಿ, ಅಕ್ಕ ತಮ್ಮಂದಿರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬವಾದ ನೂಲ ಹುಣ್ಣಿಮೆಯಂದು ಅಕ್ಕ ತಂಗಿಯರು ಒಡಹುಟ್ಟಿದವರಿಗೆ, ಅಣ್ ತಮ್ಮಂದಿರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದುಕೊಂಡರು.

ಗದಗ ಬೆಟಗೇರಿ ಅವಳಿ ನಗರದಲ್ಲಿ ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ತಮ್ಮ ಪ್ರೀತಿ ಪಾತ್ರರಾದ ಅಣ್ಣ ತಮ್ಮಂದಿರಿಗೆ ನೂಲು, ವಿವಿಧ ವಿನ್ಯಾಸಗಳಿಂದ ಕೂಡಿದ ಬಣ್ಣ ಬಣ್ಣದ ರಾಖಿ ಹಾಗೂ ಚಿನ್ನ ಬೆಳ್ಳಿಯ ಬ್ರಾಸ್ಲೆಟ್‍ಗಳನ್ನು ಕಟ್ಟಿ, ಸಿಹಿ ತಿನ್ನಿಸಿ, ನನ್ನ ಜೀವಿತಾವಧಿಯವರೆಗೆ ರಕ್ಷಣೆ ನೀಡು ಎಂದು ಆಶೀರ್ವಾದ ಪಡೆದರು.

ಭಾನುವಾರ ನೂಲ ಹುಣ್ಣಿಮೆ ನಿಮಿತ್ತ ನಗರದ ಪ್ರಮುಖ ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ರಾಖಿ ಖರೀದಿ ಭರಾಟೆ ಜೋರಾಗಿತ್ತು. ನಗರದ ಟಾಂಗಾಕೂಟ್‌, ಜನತಾ ಬಜಾರ್, ಬ್ಯಾಂಕ್ ರಸ್ತೆ, ಕೆ.ಸಿ.ರಾಣಿ ರಸ್ತೆ, ಮುಳಗುಂದ ನಾಕಾ, ಸ್ಟೇಷನ್ ರಸ್ತೆ, ಬೆಟಗೇರಿ ತೆಂಗಿನಕಾಯಿ ಬಜಾರ್, ಹಾತಲಗೇರಿ ನಾಕಾ ಸೇರಿ ವಿವಿಧೆಡೆ ರೇಷ್ಮೆ ನೂಲಿನ, ಜರಿ ರಾಖಿ, ಸ್ಟೋನ್ಸ್, ಚಂದನ, ಡೋರಿ, ರುದ್ರಾಕ್ಷಿ, ಅಕ್ಕಿ ರಾಖಿ, ಮುತ್ತಿನ ಹಾಗೂ ನವ ವಿನ್ಯಾಸದ 100ಕ್ಕೂ ಹೆಚ್ಚು ಪ್ರಕಾರದ ರಾಖಿಗಳು ಮಾರಾಟಗೊಂಡವು.

ರಾಖಿ ಕಟ್ಟುವ ಹೆಣ್ಣುಮಕ್ಕಳಿಗೆ ಅಣ್ಣ-ತಮ್ಮಂದಿರು ಉಡುಗೊರೆ ನೀಡುವುದು ಸಂಪ್ರದಾಯ. ರಾಖಿ ಕಟ್ಟುವ ವೇಳೆ ಪೂಜೆ ಸಲ್ಲಿಸಿ, ಸಿಹಿ ನೀಡುವುದು ಪದ್ಧತಿಯ ಒಂದು ಭಾಗವಾಗಿರುವುದರಿಂದ ಬೇಕರಿಗಳಲ್ಲಿ ಸಿಹಿ ಪದಾರ್ಥಗಳ ಖರೀದಿ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT