ಲಕ್ಷ್ಮೇಶ್ವರ: ಕಳೆದ ಮೂರು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಬುಧವಾರದಿಂದ ಮತ್ತೆ ಸುರಿಯಲಾರಂಭಿಸಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ತಿಂಗಳಾನುಗಟ್ಟಲೆ ಸುರಿದ ಮಳೆಯಿಂದಾಗಿ ಬೆಳೆಗಳಿಗೆ ವಿವಿಧ ರೋಗಗಳ ಬಾಧೆ ತಗುಲಿದೆ. ಇಂಥ ಹೊತ್ತಲ್ಲಿ ಮತ್ತೆ ಮಳೆ ಆಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.