ಸೋಮವಾರ, ಜುಲೈ 26, 2021
21 °C
ನರಗುಂದದಲ್ಲಿ ಒಗ್ಡೆನಿಯಾ ಪ್ರಭೇದದ ಕೀಟ

ಗದಗ: ಅಪರೂಪದ ಜೇಡ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲಾ ಆವರಣದಲ್ಲಿ ಅಪರೂಪದ ಒಗ್ಡೆನಿಯಾ ಪ್ರಭೇದದ ಜೇಡ ಪತ್ತೆಯಾಗಿರುವ ಬಗ್ಗೆ ಜೀವ ವೈವಿಧ್ಯ ವಿಜ್ಞಾನಿ ಮಂಜುನಾಥ ನಾಯಕ ಬುಧವಾರ ತಿಳಿಸಿದರು.

‘ಸಾಲ್ಟಿಸಿಡೆ ಕುಟುಂಬದ ಒಗ್ಡೆನಿಯಾ ಪ್ರಭೇದದ ಈ ಜೇಡವು ರೂಪದಲ್ಲಿ ಇರುವೆಯನ್ನು ಹೋಲುತ್ತದೆ. ಇದನ್ನು ಅನುಕರಣಿಜೇಡ ಅಥವಾ ಆ್ಯಂಟ್ ಮಿಮಿಕ್ ಎಂದು ಕರೆಯುತ್ತಾರೆ. ಗಾತ್ರವು 9 ರಿಂದ 9.5 ಮಿ.ಮೀ ಇರುತ್ತದೆ. ಜೀವಿಗಳ ವಿಕಸನಕ್ಕನುಗುಣವಾಗಿ ಪರ ಭಕ್ಷಕಗಳಿಂದ ರಕ್ಷಣೆ ಪಡೆಯಲು ಈ ಜೇಡಗಳು ನಡವಳಿಕೆ ಮತ್ತು ದೈಹಿಕ ರೂಪಗಳಲ್ಲಿ ಇರುವೆಯನ್ನು ಅನುಕರಣೆ ಮಾಡಲು ಸಾಧ್ಯವಾಗುವ ರಚನೆಯನ್ನು ಹೊಂದಿವೆ’ ಎಂದು ಅವರು ತಿಳಿಸಿದರು.

‘ಇರುವೆ ಅನುಕರಣೆ ಜೇಡಗಳು ‘ಮಿಥ್ಯ-ಸೊಂಟ’ದ ರಚನೆ ಹೊಂದಿದ್ದು ಇರುವೆಗಳ ಅಂಕು–ಡೊಂಕು ಚಲನೆಯನ್ನು ಅಳವಡಿಸಿಕೊಂಡಿವೆ. ಇರುವೆಗಳನ್ನು ತಿನ್ನಲು ಮತ್ತು ಇರುವೆಗಳಿಗೆ ಆಹಾರವಾಗದಂತೆ ಈ ಜಾತಿಯ ಜೇಡಗಳಿಗೆ ಜೀವ–ವಿಕಾಸದ ಹಂತದಲ್ಲಿಯೇ ಪ್ರಕೃತಿ ದತ್ತ ರಕ್ಷಣೆ ಒದಗಿಬಂದಿರುತ್ತದೆ’ ಎಂದು ತಿಳಿಸಿದ್ದಾರೆ.

ಈವರೆಗೆ ಕರ್ನಾಟಕದಲ್ಲಿ ಎಲ್ಲಿಯೂ ಈ ಪ್ರಭೇದದ ಜೇಡ ದಾಖಲಾಗಿಲ್ಲ. ಈ ಜೇಡಗಳ ಅಧ್ಯಯನವಾಗಬೇಕಿದೆ. ಜೇಡಗಳು ಬೆಳೆಗಳಿಗೆ ಮಾರಕವಾದ ಕೀಟಗಳನ್ನು ಭಕ್ಷಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಂರಕ್ಷಣೆ ಅವಶ್ಯವಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು