ಗದಗ: ನಗರದ ಗಂಜಿ ಬಸವೇಶ್ವರ ದೇವಸ್ಥಾನದಲ್ಲಿ ಬೇಡಿದ ವರ ಕೊಡುವ ಕಾಮಣ್ಣ ಎಂದೇ ಪ್ರಸಿದ್ಧಿಯಾದ ಮುಳ್ಳ ಅಗಸಿಯ 173ನೇ ವರ್ಷದ ರತಿ–ಮನ್ಮಥರ ಮೂರ್ತಿಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯಿತು.

ರತಿ–ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ವೇಳೆ ವಿವಿಧ ಬಗೆಯ ಹೂಗಳಿಂದ ತಳಿರು ತೋರಣ ಕಟ್ಟಲಾಗಿತ್ತು. ದೀಪಾಲಂಕಾರ ಮಾಡಲಾಗಿತ್ತು. ಮೂರ್ತಿಗಳಿಗೆ ಆಕರ್ಷಕ ರೀತಿಯಲ್ಲಿ ವಸ್ತ್ರ ವಿನ್ಯಾಸ ಮಾಡಲಾಗಿತ್ತು. ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು.

ಬೇಡಿದ ವರ ಕೊಡುವ ಕಾಮಣ್ಣನೆಂದು ಪ್ರಸಿದ್ಧಿ ಪಡೆದಿರುವ ಮುಳ್ಳು ಅಗಸೆಯ ಕಾಮಣ್ಣನ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ರತಿ–ಮನ್ಮಥರ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ನಿಂಗಪ್ಪ ಪಡಗದ, ವೀರನಗೌಡ ಮರಿಗೌಡರ, ತೋಟಯ್ಯಾ ವಿಭೂತಿಮಠ, ಸಿದ್ದರಾಮಪ್ಪ ಹುಂಬಿ, ಮಂಜುನಾಥ ಲಕ್ಕುಂಡಿ, ಎಫ್.ವಿ.ಮರಿಗೌಡ್ರ, ಪ್ರಶಾಂತ ಶಾಬಾದಿಮಠ, ಸೋಮಪ್ಪ ಪುರದ, ಶಂಕರ ಕರಬಿಷ್ಠಿ, ರಮೇಶ ಸಂಕಣ್ಣವರ, ಸಿದ್ಧಲಿಂಗೇಶ ಸಂಗನಾಳ, ಪ್ರಶಾಂತ ಮುದೇಗೊಣ್ಣವರ, ಗಂಗಾಧರ ಕೊಪ್ಪದ, ಸಿದ್ಧಲಿಂಗೇಶ ಗಾಣಿಗೇರ, ಸದಾಶಿವಯ್ಯ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.