ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ರಾಯರ ಮಧ್ಯಾರಾಧನೆ: ಲಘು ರಥೋತ್ಸವ

Published : 22 ಆಗಸ್ಟ್ 2024, 15:09 IST
Last Updated : 22 ಆಗಸ್ಟ್ 2024, 15:09 IST
ಫಾಲೋ ಮಾಡಿ
Comments

ಮುಂಡರಗಿ: ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಯ ಆರಾಧನಾ ಮಹೋತ್ಸವದ ಪ್ರಯುಕ್ತ ಪಟ್ಟಣದ ನಂಜನಗೂಡು ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಗುರುವಾರ ಮಧ್ಯಾರಾಧನೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಕ್ಷೀರಾಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಮಠದ ಆವರಣದಲ್ಲಿ ರಾಘವೇಂದ್ರ ಸ್ವಾಮೀಜಿ ಅವರ ಲಘು ರಥೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಭಕ್ತ ಸಮೂಹಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವಿವಿಧ ಮಹಿಳಾ ಮಂಡಳಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮಠದ ಗೌರವ ವಿಚಾರಣಾಕರ್ತ ನಾರಾಯಣಪ್ಪ ಇಲ್ಲೂರ ಮಾತನಾಡಿ, ‘13 ವರ್ಷಗಳಿಂದ ಮಠದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ನಂಬಿದ ಭಕ್ತರನ್ನು ರಾಘವೇಂದ್ರ ಸ್ವಾಮಿಗಳು ಎಂದಿಗೂ ಕೈಬಿಡುವುದಿಲ್ಲ’ ಎಂದರು.

ಪ್ರಧಾನ ಅರ್ಚಕ ಶ್ರೀನಿಧಿ, ಅರ್ಚಕ ರಘೋತ್ತಮ ಡಂಬಳ ಪೂಜಾ ಕೈಂಕರ್ಯ ನೆರವೇರಿಸಿದರು. ವಿ.ಎಲ್. ನಾಡಗೌಡರ, ರಾಮಣ್ಣ ಇಲ್ಲೂರ, ಮಂಜುನಾಥ ಇಟಗಿ, ನಾಗರಾಜ ಮುರುಡಿ, ಮಂಜುನಾಥ ಮುಧೋಳ, ರಾಘವೇಂದ್ರ ಕುಲಕರ್ಣಿ, ಎಚ್.ಕೆ. ಕೃಷ್ಣಮೂರ್ತಿ, ಅನಿಲ ನಂಜನಗೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT