ರಸ್ತೆ ಅವ್ಯವಸ್ಥೆ: ವಾಹನ ಸವಾರರ ಪರದಾಟ

7
24X7 ನೀರಿನ ಯೋಜನೆ ಕಾಮಗಾರಿ

ರಸ್ತೆ ಅವ್ಯವಸ್ಥೆ: ವಾಹನ ಸವಾರರ ಪರದಾಟ

Published:
Updated:
Deccan Herald

ರೋಣ: ಗದಗ- ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೂಡಿ ವೃತ್ತದ ಬಳಿ ಇರುವಂತಹ ಮುಖ್ಯ ರಸ್ತೆಯು 24X7 ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಸಂಪೂರ್ಣವಾಗಿ ಹಾಳಾಗಿದ್ದು ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಹಲವು ದಿನಗಳ ಹಿಂದೆ ಪೈಪ್ ಲೈನ್ ಅಳವಡಿಸುವ ಸಲುವಾಗಿ ರಸ್ತೆಯನ್ನು ಅಗೆದಿದ್ದು ರಸ್ತೆಯು ಸಂಪೂರ್ಣ ಗುಂಡಿಗಳಿಂದ ಆವೃತವಾಗಿದ್ದವು. ಇದೀಗ ಕಾಮಗಾರಿ ಸಂಪೂರ್ಣಗೊಂಡಿದ್ದು ಗುಂಡಿ ಮುಚ್ಚುವ ಸಲುವಾಗಿ ಮಣ್ಣು ಹಾಕಿದ್ದು ಇದರಿಂದಾಗಿ ರಸ್ತೆಯೂ ಮೊದಲಿಗಿಂತಲೂ ಹಾಳಾಗಿದೆ. ಮಣ್ಣು ಹಾಕಿದ್ದರಿಂದ ಕೆಲವು ಕಡೆ ಗುಂಡಿ ಬಿದ್ದಿದ್ದು ಮತ್ತೆ ಕೆಲವು ಕಡೆ ಎತ್ತರವಾದ ಪ್ರದೇಶ ನಿರ್ಮಾಣವಾಗಿದೆ. ಮಣ್ಣಿನಲ್ಲಿ ವಾಹನ ಸಿಲುಕಿಕೊಳ್ಳುವ ಭೀತಿ ಸವಾರರನ್ನು ಕಾಡುತ್ತಿದೆ.

ಹಲವು ತಿಂಗಳುಗಳಿಂದ ಒಂದಿಲ್ಲಾ ಒಂದು ಕಾಮಗಾರಿಯ ನೆಪದಲ್ಲಿ ಈ ರಸ್ತೆಯನ್ನು ತಮ್ಮ ಮನಬಂದಂತೆ ಗುತ್ತಿಗೆದಾರರು ಅಗೆದು ಹಾಳು ಮಾಡಿದ್ದು ತಮ್ಮ ಕಾಮಗಾರಿ ಮುಗಿದ ಮೇಲೆ ಯಾರಿಗೆ ಏನಾದರೆ ನಮಗೇನು ಎಂಬಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೆಸರಿಗೆ ಮಾತ್ರ ಮಣ್ಣು ಹಾಕಿ ಹೋಗಿದ್ದಾರೆ. ಆದರೆ ಈ ರಸ್ತೆಯಲ್ಲಿ ತಿರುವುಗಳಿದ್ದು ರಾತ್ರಿ ಸಮಯದಲ್ಲಿ ಸಂಚರಿಸುವಾಗ ಚಾಲಕರು ಸ್ಪಲ್ಪ ಮೈಮರೆತರು ಅಪಾಯ ಕಟ್ಟಿಟ್ಟ ಬುತ್ತಿ.

ರಸ್ತೆಯಲ್ಲಿ ಬೃಹತ್ ಪ್ರಮಾಣದ ಮಣ್ಣು ಹಾಗೂ ಗುಂಡಿಗಳು ಬಿದ್ದಿರುವುದರಿಂದಾಗಿ ವಾಹನ ಸವಾರರು ಸಂಚಾರ ನಿಯಮವನ್ನು ಅನಿವಾರ್ಯವಾಗಿ ಉಲ್ಲಂಘಿಸಿ ವಾಹನ ಸವಾರಿ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಗುಂಡಿಗಳನ್ನು ತಪ್ಪಿಸುವ ಸಲುವಾಗಿ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.

ಈ ಕುರಿತಾಗಿ ಮಾಹಿತಿ ಪಡೆಯಲು 24X7 ಯೋಜನೆಯ ಎಇಇ ಜೋಶಿಯವರನ್ನು ದೂರವಾಣಿ ಸಂಪರ್ಕಿಸಲು ಯತ್ನಿಸಿದ್ದು ಫಲ ನೀಡಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !