ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳು ರಾಜಕೀಯ

Last Updated 23 ಮೇ 2018, 20:00 IST
ಅಕ್ಷರ ಗಾತ್ರ

ಕೆಲವೇ ತಿಂಗಳುಗಳ ಹಿಂದೆ ಮಣಿಶಂಕರ್ ಅಯ್ಯರ್‌ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ನೀಚ’ ಎಂಬ ಪದದಿಂದ ನಿಂದಿಸಿದರು. ಆ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಅನೇಕ ವ್ಯಕ್ತಿಗಳ ಟೀಕೆಗಳಿಗೆ ಮಣಿದು ಅಯ್ಯರ್‌ ಅವರ ಮಾತು ಖಂಡಿಸಿ ಕಾಂಗ್ರೆಸ್‌ನವರು ಅವರನ್ನು ಪಕ್ಷದಿಂದ ಅಮಾನತುಗೊಳಿಸಿದರು.

ಆದರೆ  ದೇವೇಗೌಡರು ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ಕಾಂಗ್ರೆಸ್ಸಿನ ಮುಖ್ಯಮಂತ್ರಿಯನ್ನು ನೀಚ ಎಂದು ಜರಿದಿದ್ದರೂ ಆ ಬಗ್ಗೆ ತುಟಿಕ್ ಪಿಟಿಕ್ ಅನ್ನಲಿಲ್ಲ. 38 ಶಾಸಕರನ್ನು ಇಟ್ಟುಕೊಂಡಿರುವ ಗೌಡರ ಪಕ್ಷಕ್ಕೆ ಈಗ ತಲೆಬಾಗಿ, ಮಂಡಿಯೂರಿ, ಮಣೆ ಹಾಕಿ ಅವರ ಕುಮಾರನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಗೌಡರು ‘ನನಗೆ ಈಗ ಅತೀವ ತೃಪ್ತಿಯಾಗಿದೆ’ ಎಂದು ಉದ್ಗರಿಸುವಂತೆ ಮಾಡಿದ್ದಾರೆ.

ಈ ಕ್ರಮ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಅಷಾಢಭೂತಿ ಮನೋಭಾವ, ದ್ವಿಮುಖ ನೀತಿ ಮತ್ತು ಅಧಿಕಾರ ದಾಹ ತೀರಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಬಲ್ಲ ಕೀಳು ಮನೋಭಾವದ ರಾಜಕೀಯ... ಇವನ್ನೆಲ್ಲ ಸಾಬೀತುಪಡಿಸುತ್ತವೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT