ರೋಣ: ‘ಡಿಎಪಿ ಮತ್ತು ಯೂರಿಯಾ ಜೊತೆಗೆ ಇತರ ಉತ್ಪನ್ನಗಳನ್ನು ಒತ್ತಾಯ ಪೂರ್ವಕವಾಗಿ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು’ ಎಂದು ರೋಣ ತಾಲ್ಲೂಕು ಕೃಷಿ ಪರಿಕರಗಳ ಮಾರಾಟಗಾರ ಸಂಘದ ಅಧ್ಯಕ್ಷ ವಿಶ್ವನಾಥ ಗಡಗಿ ಹೇಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರದ ಕೃಷಿ ಪರಿಕರಗಳ ಮಾರಾಟಗಾರರ ಸಂಘ ನೀಡಿದ ರಾಷ್ಟ್ರ ವ್ಯಾಪಿ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿ ಸೋಮವಾರ ರೋಣ ತಾಲ್ಲೂಕು ಕೃಷಿ ಪರಿಕರಗಳ ಮಾರಾಟಗಾರರಸಂಘವು ಉಪ ತಹಶೀಲ್ದಾರ್ ಜಿ.ಟಿ.ಕೊಪ್ಪದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಗೊಬ್ಬರ ಬೀಜ ಕೀಟನಾಶಕಗಳ ಸ್ಯಾಂಪಲ್ ಕಳಪೆ ಬಂದಾಗ ಕಂಪನಿ ಮೇಲೆ ಕೇಸ್ ಹಾಕಿ ಡೀಲರ್ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು, ಡೀಲರ್ಗಳಿಂದ ಸ್ಯಾಂಪಲ್ ಡ್ರಾ ಮಾಡಿದಾಗ ಸ್ಯಾಂಪಲ್ ಹಣವನ್ನು ಡೀಲರ್ಗಳಿಗೆ ಪಾವತಿ ಮಾಡಬೇಕು, ಎಫ್.ಐ.ಡಿ ಮುಖಾಂತರ ರಸಗೊಬ್ಬರ ಮಾರಾಟ ಮಾಡುವ ಆದೇಶ ಸ್ವಾಗತಿಸುತ್ತೇವೆ, ಎಫ್.ಐ.ಡಿ ಮುಖಾಂತರ ಡಿಎಪಿ ಮತ್ತು ಯೂರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು, ಅನಧಿಕೃತ ಕೃಷಿ ಉತ್ಪನ್ನಗಳ ಕೃಷಿ ಪರಿಕರಗಳ ಮಾರಾಟಗಾರರ ಮೇಲೆ ಕಾನೂನು ಕ್ರಮ ವಹಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

ನೀಲಪ್ಪ ಬಳಿಗೇರ, ರಫೀಕ್ ನರಗುಂದ, ಶರಣಪ್ಪ ಇಟಗಿ, ಚಂದ್ರಪ್ಪ ಜೂಜಿನ, ರುದ್ರಯ್ಯ ಭಿಕ್ಷಾವತಿಮಠ, ಸುರೇಶ ವತ್ತಟ್ಟಿ, ಪ್ರಕಾಶ್ ಬುಳ್ಳಾ, ರಾಚಯ್ಯ ಹಿರೇಮಠ, ವೀರನಗೌಡ ಕೆಂಚನಗೌಡ್ರ ಸೇರಿದಂತೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-1022469506

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.