ರೋಣ: ಸಮಾಜದ ಕಣ್ಣಿಗೆ ಅವರು ಕೇವಲ ಚಪ್ಪಾಳೆ ತಟ್ಟುವ ಕೈಗಳಾಗಿ, ಭಿಕ್ಷೆ ಬೇಡುವ ಮುಖಗಳಾಗಿ, ಅಣಕದ ವಸ್ತುವಾಗಿ ಕಾಣಿಸುತ್ತಾರೆ. ಆದರೆ, ಸಮಾಜದ ತೆಗಳಿಕೆ ಮೆಟ್ಟಿ ನಿಂತು, ಯಾರ ಮುಂದೆಯೂ ಕೈಯೊಡ್ಡುವುದಿಲ್ಲ, ಕಷ್ಟಪಟ್ಟು ಬೆವರು ಸುರಿಸಿ ದುಡಿದು ಬದುಕುತ್ತೇನೆ ಎಂದು ಎದೆಯುಬ್ಬಿಸಿ ಹೇಳುತ್ತಾರೆ ರಮೇಶ ಕಂಬಳಿ.

ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ ಅವರಿಗೆ ಸುಮಾರು 20 ವರ್ಷಗಳ ಹಿಂದೆ ತನ್ನ ದೇಹ ಹಾಗೂ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ, ಬದಲಾವಣೆಗಳನ್ನು ಕಂಡಾಗ ಜಗತ್ತೇ ಶೂನ್ಯವೆನಿಸಿತ್ತು. ತಾನು ತೃತೀಯಲಿಂಗಿ ಎಂದು ಸಮಾಜಕ್ಕೆ ಗೊತ್ತಾದಾಗ ಎದುರಿಸಬೇಕಾಗಿ ಬಂದ ಚುಚ್ಚು ಮಾತುಗಳು, ಹೀಯಾಳಿಸುವ ನೋಟಗಳು ಒಂದೆರಡಲ್ಲ. ಹೆತ್ತ ತಂದೆಯೂ ಕಣ್ಣು ಮುಚ್ಚಿದಾಗ ಇಡೀ ಕುಟುಂಬ ಅನಾಥವಾಯಿತು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಗುವನ್ನು ಕೈಬಿಡದ ವೃದ್ಧ ತಾಯಿ, ಆ ಜೀವಕ್ಕೆ ಆಸರೆಯಾಗಿ ನಿಂತಳು.

ತಾಯಿಯ ಹೊಟ್ಟೆ ತುಂಬಿಸಲು ಮತ್ತು ತಾನು ಯಾರಿಗೂ ಹೊರೆ ಆಗಬಾರದು ಎಂದು ನಿರ್ಧರಿಸಿದ ರಮೇಶ ಕಂಬಳಿ, ಆರಂಭದಲ್ಲಿ ಆರಿಸಿಕೊಂಡಿದ್ದು ಕುರಿ ಕಾಯುವ ಕೆಲಸ. ಬಿಸಿಲು, ಮಳೆ, ಗಾಳಿ ಎನ್ನದೆ ಹಗಲಿರುಳು ಕಾಡು-ಮೇಡು ಅಲೆಯುತ್ತಾ, ಸಿಗುವ ಅಲ್ಪ ಆದಾಯದಲ್ಲಿ ತಾಯಿಯನ್ನು ಸಲಹುತ್ತಿದ್ದರು.

ಕುರಿ ಕಾಯುತ್ತಾ ಸಾಗುತ್ತಿದ್ದ ರಮೇಶನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಉದ್ಯೋಗ ಚೀಟಿ ಹೊಂದಿರುವ ರಮೇಶ, ಗ್ರಾಮದ ಯುವಕರಿಗೆ ಮಾದರಿಯಾಗಿ ಕೆಲಸ ಮಾಡುತ್ತಾರೆ. ಕೆರೆ ಹೂಳೆತ್ತುವುದು, ಬದು ನಿರ್ಮಾಣ ಮುಂತಾದ ಕಠಿಣ ಶ್ರಮದ ಕೆಲಸಗಳನ್ನು ಹಸನ್ಮುಖಿಯಾಗಿ ಮಾಡುತ್ತಾ ಸರ್ಕಾರದ ಯೋಜನೆಯನ್ನು ತನ್ನ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ.

ಒಂದು ಎಕರೆ ಒಣ ಬೇಸಾಯದ ಜಮೀನು ಮತ್ತು ಒಂದು ಪುಟ್ಟ ಮನೆಯಲ್ಲಿ ತಾಯಿಯ ಜೊತೆ ವಾಸವಿರುವ ಅವರು, ನರೇಗಾ ಕೆಲಸವಿಲ್ಲದ ದಿನಗಳಲ್ಲಿ ಖಾಲಿ ಕೂರದೆ ಬೇರೆ ರೈತರ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-23-1596790073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.