ರೋಣ: ತಾಲ್ಲೂಕಿನ ಹೊಳೆಆಲೂರು ಸಮೀಪ ಹೊಳೆಹಡಗಲಿ ಗ್ರಾಮದ ನವೀನ ತೋಟನಗೌಡ್ರ ಅವರಿಗೆ ಸೇರಿದ ಜಮೀನಿನಲ್ಲಿ ಬೋಯಿಡೆ ಪ್ರಜಾತಿಗೆ ಸೇರಿದ ರೆಡ್ ಸ್ಯಾಂಡ್ ಬೊವಾ ಹಾವು ಪತ್ತೆಯಾಗಿದ್ದು, ಗ್ರಾಮದ ಸಾವಯವ ರೈತ ಮಹೇಶ ಕೆಂಚನಗೌಡ್ರ ಹಾಗೂ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್ ನೇತೃತ್ವದಲ್ಲಿ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸಾಮಾನ್ಯವಾಗಿ ಮಣ್ಣಮುಕ್ಕು ಹಾವು ಎಂದು ಗುರುತಿಸಲ್ಪಡುವ ಈ ಹಾವು, ಕೆಂಪು-ಕಂದು ಬಣ್ಣದಿಂದ ಕೂಡಿದ ಚರ್ಮ ಹೊಂದಿದೆ. ಸುಮಾರು 75 ಸೆ.ಮೀ. ಉದ್ದ ಬೆಳೆಯುತ್ತದೆ. ಇವುಗಳ ಬಾಲವು ತಲೆಯಂತೆ ಕಾಣುವುದರಿಂದ ಇವುಗಳಿಗೆ ಎರಡು ತಲೆ ಹಾವು, ಡಬಲ್ ಇಂಜಿನ್ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಬಯಲು ಸೀಮೆಯ ಹೊಲಗದ್ದೆಗಳಲ್ಲಿ ವಿರಳವಾಗಿ ಗೋಚರಿಸಲ್ಪಡುವ ಈ ಹಾವು ವಿಶೇಷವಾಗಿ ಶುಷ್ಕ ಮರಳು ಮಿಶ್ರಿತ ಕೃಷಿ ಭೂಮಿ ಮತ್ತು ಪೊದೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಮೂಢ ನಂಬಿಕೆ: ಈ ಹಾವನ್ನು ಮನೆಯಲ್ಲಿ ಸಾಕುವುದರಿಂದ ಅದರ ಗಾತ್ರ ಹೆಚ್ಚಾದಷ್ಟು ಮನೆಯ ಐಶ್ವರ್ಯ ಹೆಚ್ಚಾಗುತ್ತದೆ. ಗುಪ್ತ ನಿಧಿ ಸಿಗುತ್ತದೆ. ಇದರ ಮಾಂಸ ತಿಂದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂಬ ಮೂಢನಂಬಿಕೆಗಳಿವೆ. ಇದರ ಮಾಂಸ ಸೇವನೆಯಿಂದ ಏಡ್ಸ್ ರೋಗ ವಾಸಿಯಾಗುತ್ತದೆ ಎಂಬ ವದಂತಿಯಿಂದಾಗಿ ಕಾಳ ಸಂತೆಯಲ್ಲಿ ಇದಕ್ಕೆ ಕೋಟಿಗಟ್ಟಲೆ ಬೆಲೆ ಇದೆ ಎಂಬ ಗಾಳಿ ಸುದ್ದಿಗಳು ಆಗಾಗ ಕೇಳಿ ಬರುತ್ತದೆ. ಈ ಹಾವಿನ ಬೆನ್ನು ಮೂಳೆ ಹಾಗೂ ದೇಹದ ಭಾಗಗಳನ್ನು ಕೆಲವರು ಮಾಟ- ಮಂತ್ರಕ್ಕೂ ಬಳಸುವುದುಂಟು.

ವಿಶೇಷತೆ: ನಿಸರ್ಗದಲ್ಲಿ ತನ್ನ ವೈರಿಗಳಿಂದ ಅಥವಾ ತನ್ನನ್ನು ಭಕ್ಷಿಸುವ ಇತರ ಜೀವಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಲೆಯನ್ನೇ ಹೋಲುವ ಬಾಲವನ್ನು ಪ್ರಕೃತಿ ಈ ಹಾವುಗಳಿಗೆ ವರದಾನವಾಗಿ ಕೊಟ್ಟಿದೆ. ಇವು ಪ್ರಮುಖವಾಗಿ ಕೃಷಿ ಭೂಮಿಯಲ್ಲಿನ ಇಲಿ, ಹೆಗ್ಗಣ, ಹಲ್ಲಿ, ಓತಿಕ್ಯಾತ, ಉಡ ಇನ್ನಿತರ ಸಣ್ಣ ಸಸ್ತನಿಗಳನ್ನು ತಿಂದು ಜೀವಿಸುತ್ತವೆ. ಮಣ್ಣು ಅಗೆದು ಇದು ವಾಸಿಸುವುದರಿಂದ ಮಣ್ಣಿನಲ್ಲಿ ಗಾಳಿ ಮತ್ತು ಪೋಷಕಾಂಶಗಳು ಚಲಾವಣೆಯಾಗಲು ಸಹಾಯ ಮಾಡುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡುತ್ತದೆ. ಆ ಮೂಲಕ ಪರೋಕ್ಷವಾಗಿ ರೈತರಿಗೆ ಸಹಾಯ ಮಾಡುವ ಇದು ವಿಷರಹಿತ ಹಾವಾಗಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-23-1463487657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.