5
ಸದನದಲ್ಲಿ ಸಂಕನೂರ ಪ್ರಶ್ನೆ

‘ಜಿಮ್ಸ್‌’ನಲ್ಲಿ ಪ್ರತ್ಯೇಕ ಟಿ.ಬಿ ವಾರ್ಡ್‌ ಯಾಕಿಲ್ಲ..?

Published:
Updated:
ಎಸ್‌.ವಿ ಸಂಕನೂರ

ಗದಗ: ‘ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) ಎಂಡಿಆರ್ – ಟಿ.ಬಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ ಸ್ಥಾಪಿಸಲು ತುರ್ತು ಕ್ರಮ ವಹಿಸಲಾಗುವುದು. ಈಗಾಗಲೇ ಈ ವಿಭಾಗಕ್ಕೆ ಎರಡು ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ ಸದನದಲ್ಲಿ ಉತ್ತರಿಸಿದ್ದಾರೆ.

‘ಜಿಮ್ಸ್‌’ ಪ್ರಾರಂಭಗೊಂಡು 7 ವರ್ಷ ಕಳೆದರೂ, ಟಿ.ಬಿ ರೋಗಿಗಳಿಗೆ ಯಾಕೆ ಪ್ರತ್ಯೇಕ ವಾರ್ಡ್‌ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ವಿ ಸಂಕನೂರ ಅವರು ಈ ಕುರಿತು ಪ್ರಶ್ನಿಸಿದ್ದರು. ‘ಜಿಮ್ಸ್‌ನಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಈ ಕಟ್ಟಡ ನಿರ್ಮಾಣಗೊಂಡ ನಂತರ ಅದರಲ್ಲೂ ಟಿ.ಬಿ ರೋಗಿಗಳಿಗಾಗಿ ಪ್ರತ್ಯೇಕ ವಾರ್ಡ್‌ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಸಚಿವರು ಉತ್ತರಿಸಿದ್ದಾರೆ.

‘ಜಿಮ್ಸ್‌’ನಲ್ಲಿ ರೋಗಿಗಳ ನಿತ್ಯ ಬಳಕೆಗೆ ನಿರಿನ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸದ್ಯ ಹಮ್ಮಿಗೆ ಬ್ಯಾರೇಜ್‌ನಿಂದ ಗದಗ–ಬೆಟಗೇರಿ ಅವಳಿ ನಗರಕ್ಕೆ ನಿರಂತರ ನೀರು ಪೂರೈಸಲು ಪ್ರಾರಂಭಿಸಿರುವ ತುಂಗಭದ್ರಾ 24x7 ಕುಡಿಯುವ ನೀರಿನ ಯೋಜನೆಯಡಿ ಇದಕ್ಕೆ ಪರಿಹಾರ ಕಲ್ಪಿಸಲಾಗುವುದು’ ಎಂದೂ ಸಚಿವರು ತಿಳಿಸಿರುವುದಾಗಿ ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !