ಸರಣಿ ಕಳುವು: ಸಾರ್ವಜನಿಕರಲ್ಲಿ ಆತಂಕ

7

ಸರಣಿ ಕಳುವು: ಸಾರ್ವಜನಿಕರಲ್ಲಿ ಆತಂಕ

Published:
Updated:
Deccan Herald

ಗಜೇಂದ್ರಗಡ: ಪಟ್ಟಣದ ಗದಗ ರಸ್ತೆಯಲ್ಲಿನ ಮೂರು ಅಂಗಡಿಗಳಲ್ಲಿ ಶನಿವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಾರ್ವಜನಿಕರು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಇಲ್ಲಿನ ಆರ್.ಎಚ್.ಬ್ಯಾಂಗಲ್ಸ್ ಅಂಗಡಿಯ ಮುಂಭಾಗದಲ್ಲಿದ್ದ ಸಿ.ಸಿ.ಟಿವಿ ಕ್ಯಾಮೆರಾ, ಬೀದಿ ದೀಪ ಜಖಂಗೊಳಿಸಿ  ಪ್ರಶಾಂತ ಟೈರ್ಸ್, ಬಿಸ್ಮಿಲ್ಲಾ ಪಂಕ್ಚರ್‌ ಅಂಗಡಿಗಳ ಬೀಗ ಮುರಿದು ಕಳುವು ಮಾಡಲಾಗಿದೆ.

ಇಲ್ಲಿನ ಜೋಡು ರಸ್ತೆ, ರೋಣ ರಸ್ತೆಯಲ್ಲಿ ಇತ್ತೀಚೆಗೆ ಕಳುವು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೋಣ ಸಿಪಿಐ ಕೆ.ಸಿ.ಪ್ರಕಾಶ, ಸ್ಥಳೀಯ ಪಿಎಸ್‌ಐ ಆರ್.ವೈ.ಜಲಗೇರಿ, ಸಿಬ್ಬಂದಿ ಸುರೇಶ ಮಂತಾ, ಕನಕಯ್ಯ ಜಮಾದಾರ, ಮುತ್ತು ಮೊದಲಿಯಾರ, ಚಂದ್ರು ಹಾದಿಮನಿ, ಸುರೇಶ ಶ್ಯಾವಿ, ನಿಂಗಪ್ಪ ಹಲವಾಗಿಲ, ಶ್ರೀಕಾಂತ ಜಂಗಣ್ಣವರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !