ಮಂಗಳವಾರ, ಜನವರಿ 26, 2021
16 °C

ವೀರಯೋಧನ ಪ್ರತಿಮೆ ಅನಾವರಣ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 9.30ಕ್ಕೆ ವೀರಯೋಧ ದಿ. ಹನುಮಂತಪ್ಪ ಸೋಗಿಹಾಳ ಅವರ ಪ್ರತಿಮೆ ಅನಾವರಣ, ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ನಡೆಯಲಿದೆ.

ಪ್ರತಿಮೆ ಅನಾವರಣದ ಸಮಾರಂಭದಲ್ಲಿ ಮೈಸೂರಿನ ಬನ್ನಿಕೊಪ್ಪ- ಜಪದಕಟ್ಟಿ ಮಠದ ಸುಜ್ಞಾನದೇವ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸುವರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಹುಲ್ಲೂರಿನ ಶಿವಮೂರ್ತಯ್ಯ ಅಮೋಘಿಮಠ ಉಪಸ್ಥಿತರಿರುವರು. ಶಾಸಕ ರಾಮಣ್ಣ ಲಮಾಣಿ ಪ್ರತಿಮೆ ಅನಾವರಣ ಗೊಳಿಸುವರು. ಮಾಜಿ ಶಾಸಕ ರಾಮಕೃಷ್ಣ
ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸುವರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಉಮಾ ಹೊನಗಣ್ಣವರ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಖಾ ಅಳವಂಡಿ, ಮಾಜಿ ಶಾಸಕ ರಾದ ಎಸ್.ಎನ್.ಪಾಟೀಲ, ಜಿ.ಎಸ್.ಗಡ್ಡದ್ದೇವರಮಠ, ತಹಶೀಲ್ದಾರ ಯಲ್ಲಪ್ಪಗೋನೆಣ್ಣವರ, ಯು.ಎನ್.ಹೊಳಲಾಪೂರ, ವಿಕಾಸ ಲಮಾಣಿ, ಹುಮಾಯನ ಮಾಗಡಿ, ಲಕ್ಷ್ಮಣಗೌಡ್ರ ಪಾಟೀಲ, ವೈ.ಎನ್.ಗೌಡರ, ಅರುಣ ಅಣ್ಣಿಗೇರಿ, ನಿಂಗಪ್ಪ ಓಲೇಕಾರ, ಸುರೇಶ ಲಮಾಣಿ,
ಮಂಜುನಾಥ ಘಂಟಿ, ಶಿವಪ್ರಕಾಶ ಮಹಾಜನಶೆಟ್ರ ಉಪಸ್ಥಿತರಿರುವರು.

ಬನ್ನಿಕೊಪ್ಪ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ನೂತನ ಸದಸ್ಯರನ್ನು ಸನ್ಮಾನಿಸಲಾಗುವುದು. ವೆಂಕಟೇಶ ಆಲ್ಕೋಡ ಅವರಿಂದ ಗಾನ ನಮನ ಪ್ರಸ್ತುತಿಗೊಳ್ಳಲಿದೆ. ಶರಣಕುಮಾರ ಗುತ್ತರಿಗೆ ತಬಲಾ, ಶ್ರೀಶೈಲ ಚಿಕ್ಕಮಠ ಹಾರ್ಮೋನಿಯಂ ಸಾಥ್ ನೀಡುವರು. ಫಕ್ಕೀರಸ್ವಾಮಿ ಹಿರೇಮಠ ಹಾಗೂ ಸಂಗಡಿಗರಿಂದ ಪೌರೋಹಿತ್ಯ, ಕಾರ್ಯಕ್ರಮವನ್ನು ಶಿವಲಿಂಗಶಾಸ್ತ್ರಿ ಸಿದ್ದಾಪೂರ ನೆರವೇರಿಸುವರು ಎಂದು ನೀತಾ ಸೋಗಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.