ಲಕ್ಷ್ಮೇಶ್ವರದ ನಿವಾಸಿ ವಾಸು ಗೋಸಾವಿ ಆರೋಪಿ. ದೂರು ಕೊಡಲು ಮುಂದಾಗಿದ್ದ ಮಹಿಳೆಗೆ ದೂರು ಕೊಡದಂತೆ ತಿಳಿಸಿ, ಅ.31ರಂದು ಆಕೆಯನ್ನು ತವರು ಮನೆಗೆ ಕಳುಹಿಸುವುದಾಗಿ ನಂಬಿಸಿ, ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿಯಲ್ಲಿನ ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಹಾರದಲ್ಲಿ ಮತ್ತು ಬರಿಸುವ ವಸ್ತು ಬೆರೆಸಿ ಕೊಟ್ಟಿದ್ದು, ಮಹಿಳೆ ಮೂರ್ಚೆ ಹೋದ ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ವಿಷಯ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿಯೂ ಮಹಿಳೆ ತಿಳಿಸಿದ್ದಾರೆ.