ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕಟಗಳನ್ನು ನಿವಾರಿಸುವ ಶರಣ ಸಾಹಿತ್ಯ’

‘ಶರಣ ದರ್ಶನ’ ಗ್ರಂಥ ಬಿಡುಗಡೆ ಸಮಾರಂಭ
Last Updated 20 ಅಕ್ಟೋಬರ್ 2020, 2:15 IST
ಅಕ್ಷರ ಗಾತ್ರ

ಮುಂಡರಗಿ: ‘ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮೂರು ಪೀಠಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಜಗದ್ಗುರು ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠದ ಮೂಲಕ ಪ್ರತಿ ವರ್ಷ 12 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ ಆರ್.ಸುನಂದಮ್ಮ ಹೇಳಿದರು.

ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಜಗದ್ಗುರು ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಪ್ರಸಾರಾಂಗ ವಿಭಾಗಗಳು ಸೋಮವಾರ ಪಟ್ಟಣದ ಕೆ. ಆರ್. ಬೆಲ್ಲದ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಶರಣ ದರ್ಶನ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲ ಕಾರ್ಯಕ್ರಮಗಳೂ ಶರಣ ಸಾಹಿತ್ಯ ಮತ್ತು ಜೀವನ ಮೌಲ್ಯಗಳ ಆಧಾರದ ಮೇಲೆ ನಡೆಯುತ್ತವೆ. ಶರಣರ ವಚನಗಳಲ್ಲಿ ಪ್ರತಿಯೊಂದು ಸಂಕಟಕ್ಕೆ ಪರಿಹಾರವಿದೆ, ಹೆಣ್ಣು-ಗಂಡು ಎಂಬ ತಾರತಮ್ಯವನ್ನು ಹೋಗಲಾಡಿಸಿದ ಹೆಗ್ಗಳಿಕೆ ಶರಣ ಸಾಹಿತ್ಯಕ್ಕಿದೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ.ಅನ್ನದಾನೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

‘ಶರಣರ ಜೀವನ ಚರಿತ್ರೆ ಮತ್ತು ಅವರ ವಚನಗಳು ಮನುಷ್ಯನನ್ನು ಪೂರ್ಣತ್ವದ ಕಡೆಗೆ ಕರೆದುಕೊಂಡು ಹೋಗುತ್ತವೆ. ಮನುಷ್ಯನ ವಿಕಾಸಕ್ಕೆ ದಾರಿದೀಪವಾಗುತ್ತವೆ. ಆದ್ದರಿಂದ ಶರಣರ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ’ ಎಂದರು.

ಜಗದ್ಗುರು ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಎಂ.ನಾಗರಾಜ ಮಾತನಾಡಿದರು.

ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಶರಣ ದರ್ಶನ ಗ್ರಂಥ ಬಿಡುಗಡೆ ಮಾಡಿದರು. ಡಾ.ವಿಷ್ಣು ಶಿಂಧೆ ಗ್ರಂಥ ಪರಿಚಯ ಮಾಡಿದರು.

ಚನ್ನವೀರ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಮಹೇಶ ಚಿಂತಾಮಣಿ, ಅಂದಾನಪ್ಪ ಪಟ್ಟಣಶೆಟ್ಟರ, ಆರ್.ಆರ್.ಹೆಗ್ಗಡಾಳ, ಕೆ.ವಿ.ಹಂಚಿನಾಳ, ಬಾಬಣ್ಣ ಶಿವಶೆಟ್ಟರ, ಬಸವರಾಜ ಬನ್ನಿಕೊಪ್ಪ, ಎಸ್.ಬಿ.ಹಿರೇಮಠ, ಯು. ಸಿ . ಹಂಪಿಮಠ, ಎ.ಟಿ.ಕಲ್ಮಠ, ಡಾ.ಡಿ.ಸಿ. ಮಠ, ಡಾ.ಬಿ.ಜಿ.ಜವಳಿ, ಭಾಗ್ಯಲಕ್ಷ್ಮಿ ಇನಾಮತಿ, ಡಾ.ವನಜಾಕ್ಷಿ ಭರಮಗೌಡರ, ಡಾ.ಆರ್.ಎಚ್.ಜಂಗನವಾರಿ, ಸಂತೋಷ ಹಿರೇಮಠ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT