ಶಿರಹಟ್ಟಿ: ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನಡೆಯಿತು.

ಬಸವಣ್ಣನವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ರೇಣುಕಾ ಲಕ್ಕುಂಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳನ್ನು ಕಿತ್ತೆಸೆಯಲು ವಚನಕ್ರಾಂತಿಯನ್ನೇ ಮಾಡಿದರು. ಪ್ರತಿಯೊಬ್ಬರೂ ಅವರ ಜೀವನ, ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಮಾನತೆ ಜೀವನ ನಡೆಸೋಣ ಎಂದರು.

ಶಿವಾಜಿ ಮಹಾರಾಜರ ಬಗ್ಗೆ ಉಪನ್ಯಾಸ ನೀಡಿದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ಶಿವಾಜಿ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಸ್ವರಾಜ್ಯದ ಪರಿಕಲ್ಪನೆ ಭಾರತದಲ್ಲಿ ಹುಟ್ಟುಹಾಕಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರ ನಾಯಕತ್ವ ಗುಣ, ಸಾಹಸ, ಜೀವನ, ಆಡಳಿತ ಕಾರ್ಯವೈಖರಿ ನಮಗೆಲ್ಲರಿಗೂ ಅನುಕರಣೀಯವಾದ್ದದ್ದು’ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಮರಾಠಗಲ್ಲಿಯ ಅಂಬಾ ಭವಾನಿ ದೇವಸ್ಥಾನದಿಂದ ಬಸವಣ್ಣನವರ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಿತು. ಸಕಲ ವಾದ್ಯ ಮೇಳಗಳೊಂದಿಗೆ ಎತ್ತುಗಳ ಮೆರವಣಿಗೆ ನಡೆಯಿತು.

ಬಸವರಾಜ ತುಳಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ದೇವಗಿರಿ, ವಿಶ್ವನಾಥ ಕಪ್ಪತ್ತನವರ, ಚಂದ್ರಕಾಂತ ನೂರಶೆಟ್ಟರ, ಹುಮಾಯೂನ್ ಮಾಗಡಿ, ನಾಗರಾಜ ಲಕ್ಕುಂಡಿ, ಗೂಳಪ್ಪ ಕರಿಗಾರ, ಎನ್.ಆರ್.ಕುಲಕರ್ಣಿ, ಎಸ್.ವೈ.ಪಾಟೀಲ, ಎಂ.ಕೆ.ಲಮಾಣಿ, ಪರಮೇಶ ಪರಬ, ಎಸ್.ವೈ.ಪಾಟೀಲ, ಬಸವರಾಜ ಹಲಸೂರ, ಹೊನ್ನಪ್ಪ ಶಿರಹಟ್ಟಿ, ವಿಠ್ಠಲ ಬಿಡವೆ, ಅಕ್ಬರ್ ಯಾದಗಿರಿ, ಸಂತೋಷ ತೋಡೇಕರ, ಎಸ್.ಬಿ.ಹೊಸೂರ ಸೇರಿದಂತೆ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-1286396736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.