ಶಿರಹಟ್ಟಿ: ಹಿಂದೂ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಿ, ಅಖಿಲ ಭಾರತೀಯ ಮಟ್ಟದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಮೊದಲ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಂಘಟನೆಯ ಅಧ್ಯಕ್ಷ ಸಂತೋಷ ಕುರಿ ಮಾತನಾಡಿ, ‘ಜೀವನದುದ್ದಕ್ಕೂ ಮನುಷ್ಯ ಹಾಗೂ ಪ್ರಕೃತಿಗೆ ಕೊಡುಗೆ ನೀಡುವ ಗೋವುಗಳನ್ನು ಸರ್ಕಾರ ಸಂರಕ್ಷಣೆ ಮಾಡುವುದರ ಮೂಲಕ ಸನಾತನ ಸಂಸ್ಕೃತಿಯ ರಕ್ಷಣೆ ಮಾಡಬೇಕು. ಪ್ರತಿವರ್ಷ ಗೋವುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ದೇಶಿಯ ತಳಿಗಳು ಅಳುವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಗೋವಂಶ ಸಂರಕ್ಷಣೆ ಮುಂದಾಗಬೇಕು. ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆ ಬಂದ್ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ನಾಗರಾಜ ಲಕ್ಕುಂಡಿ ಹಾಗೂ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ‘ರೈತರ ಬೆನ್ನೆಲುಬಾಗಿ ಕೆಲಸ ಮಾಡುವ ಗೋವುಗಳ ಹತ್ಯೆ ಸಂಪೂರ್ಣವಾಗಿ ನಿಲ್ಲಬೇಕು. ಗೋಮಾತೆಗೆ ರಾಷ್ಟ್ರಮಾತೆ ಎಂಬ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಅಕ್ರಮ ಗೋಸಾಗಾಟ, ಹತ್ಯೆ ಮಾಡುವವರಿಗೆ ಕಠಿಣ ಕಾನೂನು ರೂಪಿಸಬೇಕು’ ಎಂದು ಹೇಳಿದರು.

ರಾಮಣ್ಣ ಕಂಬಳಿ, ಪರಶುರಾಮ ಡೊಂಕಬಳ್ಳಿ, ರಾಜೀವರಡ್ಡಿ ಬೊಮ್ಮನಕಟ್ಟಿ, ಪ್ರವೀಣಗೌಡ ಪಾಟೀಲ, ಶ್ರೀನಿವಾಸ ಬಾರಬಾರ, ಗೂಳಪ್ಪ ಕರಿಗಾರ, ವೀರಣ್ಣ ಅಂಗಡಿ, ಬಸವರಾಜ ಕಲ್ಯಾಣಿ, ಮಲ್ಲಿಕಾರ್ಜುನ ಕಬಾಡಿ, ಮಹಾಂತೇಶ ಹಾದಿಮನಿ, ರಮೇಶ ಬಟ್ಟೂರ, ರಮೇಶ ಶೇಳಕೆ, ಆತ್ಮಾನಂದ ಅಬ್ಬಗೇರಿ, ಬೀರೇಶ ಬಟ್ಡೂರ, ಪ್ರಶಾಂತ ಕಂಬಳಿ, ಈರಣ್ಣ ತಳವಾರ, ಋತ್ವಿಕ್ ಮಜ್ಜಗಿ, ಶಿವಾನಂದ ಕರಿಗಾರ, ಸಚಿನ್ ಆಲೂರ, ಪ್ರವೀಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-1052726049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.