ಶಿರಹಟ್ಟಿ: ತಾಲ್ಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ ಅರಣ್ಯ ಭೂಮಿ, ಬಗರ್ ಹುಕುಂ ಮತ್ತು ಹುಲ್ಲುಗಾವಲು ಜಮೀನುಗಳ ಹಕ್ಕುಪತ್ರ ಪಡೆಯುವ ಕುರಿತು ಬುಧವಾರ ಜನಜಾಗೃತಿ ಸಭೆ ನಡೆಯಿತು.

ಸಭೆಯ ನೇತೃತ್ವ ವಹಿಸಿ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ, ‘ಸರ್ಕಾರವು ಹಳೆಯ ಅರ್ಜಿಗಳ ಪುನರ್ ಪರಿಶೀಲನೆ ನಡೆಸುವುದರ ಜೊತೆಗೆ ಹೊಸ ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಿದೆ. ಹಲವು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ, ಜಮೀನುಗಳ ಹಕ್ಕುಪತ್ರ ದೊರೆಯುವ ಭರವಸೆ ನೀಡಬೇಕಿದೆ. ’ ಎಂದರು.

‘ಹಕ್ಕುಪತ್ರ ಕುರಿತು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತದ ವತಿಯಿಂದ ಪಿಡಿಒಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹಕ್ಕುಪತ್ರ ವಿತರಣೆ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ. ಗ್ರಾಮಸ್ಥರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆಯಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಹಕ್ಕುಪತ್ರ ಪಡೆಯಬೇಕು’ ಎಂದರು.

ಪರಶುರಮ ಕಟಗಿ, ಶಂಕ್ರಯ್ಯ ಫಕೀರಯ್ಯ ಹೀರೆಮಠ, ಮಂಜುನಾಥ ಕೆಲೂರ, ಈರಣ್ಣ ಚವ್ಹಾಣ, ನಿಂಗಪ್ಪ ಕಡಪಟ್ಟಿ, ಶೇಖಪ್ಪ ಲಮಾಣಿ, ಈರಪ್ಪ ಹುಬ್ಬಳ್ಳಿ, ಗೌಸ್ಮಾದ್ದೀನ್ ಬಸ್ತಿ, ಮಂಜು ಅರಪಲ್ಲಿ, ನಾಮದೇವ ಮಾಂಡ್ರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-23-563665660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.