ಶಿರಹಟ್ಟಿ: ದಿನೇ ದಿನೇ ಹೆಚ್ಚುತ್ತಿರುವ ಬೇಸಿಗೆಯ ತಾಪಕ್ಕೆ ತಾಲ್ಲೂಕಿನ ಜನತೆ ಬಸವಳಿದು ಹೋಗುತ್ತಿದ್ದಾರೆ. ಇದರ ಜತೆಗೆ ದಿನನಿತ್ಯ ಬಿಸಿಲಿನಲ್ಲಿ ದುಡಿಯುವ ಗಾರೆ ಕೆಲಸಗಾರರು, ರೈತರು, ಕೂಲಿ ಕಾರ್ಮಿಕರು ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಪ್ರಸಕ್ತ ಸಾಲಿನ ಬೇಸಿಗೆಯ ಬಿಸಿಲು ಜನಸಾಮಾನ್ಯರ ಜೀವನದ ಮೇಲೂ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಬಿಸಿಲಿನ ತಾಪ ಹೆಚ್ಚುತ್ತಿರುವ ಕಾರಣ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ಪ್ರಮುಖ ರಸ್ತೆಗಳು ಜನ, ವಾಹನ ಸಂಚಾರ ಇಲ್ಲದೇ ಬಣಗುಡುವ ದೃಶ್ಯಗಳು ಗೋಚರಿಸುತ್ತಿವೆ.

ಒಪ್ಪತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವ ಗಾರೆ ಕೆಲಸಗಾರರು ಬಿರು ಬಿಸಿಲಿನಲ್ಲಿಯೂ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಬಿಸಿಲು ಎಂದು ಕುಳಿತರೆ ದುಡಿಮೆ ಇಲ್ಲದೆ ಹೊಟ್ಟಿಗೆ ಹಿಟ್ಟಿಲ್ಲದಂತಾಗುತ್ತದೆ. ಆದ್ದರಿಂದ ಗಾರೆ ಕೆಲಸಗಾರರು, ಸೆಟ್ರಿಂಗ್ ಹಾಕುವ ಕಾರ್ಮಿಕರು ಮರದ ಟೊಂಗೆಗಗಳನ್ನು ಹಿಡಿದುಕೊಂಡು ತಮ್ಮ ಕಾಯಕವನ್ನು ಮಾಡುತ್ತಿರುವುದು ಮರುಕ ಹುಟ್ಟಿಸುವಂತಿದೆ.

ಪಟ್ಟಣದಲ್ಲಿ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಇಲ್ಲದಿರುವ ಕಾರಣ, ಜನರು ಶುದ್ಧನೀರಿನ ಘಟಕಕ್ಕೆ ಆಶ್ರಯಿಸುತ್ತಿದ್ದಾರೆ. ಪಟ್ಟಣಕ್ಕೆ ವಿವಿಧ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಅಲ್ಲಿಗೆ ಹೋಗಿ ಶುದ್ಧನೀರು ಪಡೆಯುವುದು ಕಷ್ಟಸಾಧ್ಯವಾಗಿರುವುದರಿಂದ ಬಾಟಲಿ ನೀರು, ಪೌಚ್ನಲ್ಲಿ ತುಂಬಿರುವ ನೀರಿನ ಪ್ಯಾಕೆಟ್ಗಳನ್ನು ದುಡ್ಡು ಕೊಟ್ಟು ಖರೀದಿಸುವ ಅನಿವಾರ್ಯತೆ ಎದುರಾಗಿದೆ.

ಮನೆಯೊಳಗೆ ಜನರು ಫ್ಯಾನ್, ಕೂಲರ್, ಏಸಿ ಇಲ್ಲದೇ ಇರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ಮರಗಳ ನೆರಳನ್ನೇ ಆಸರೆಯಾಗಿ ಪಡೆಯುತ್ತಿದ್ದಾರೆ. ಬೆಳಿಗ್ಗೆ 9ಕ್ಕೆ ಶುರುವಾಗುವ ಮೈಚುರುಗುಟ್ಟಿಸುವ ಬಿಸಿಲು ಸಂಜೆ 5 ಗಂಟೆಯವರೆಗೂ ಪ್ರತಾಪ ತೋರುತ್ತಿದೆ. ಬಿಸಿಲಿನ ಆರ್ಭಟ ಹೆಚ್ಚಾಗುತ್ತಿರುವುದರಿಂದ ವೃದ್ಧರು ಮನೆಯಿಂದ ಹೊರ ಬರುವ ಸಾಹಸಕ್ಕೆ ಮುಂದಾಗುತ್ತಿಲ್ಲ.

ಬಿಸಿಲಿನಿಂದ ಉಂಟಾಗುತ್ತಿರುವ ಧಗೆ ಹಾಗೂ ದಾಹವನ್ನು ತಣಿಸಿಕೊಳ್ಳಲು ಜನರು ತಂಪು ಪಾನೀಯ ಹಾಗೂ ಹಣ್ಣುಗಳ ಮೊರೆ ಹೋಗುತ್ತಿರುವುದರಿಂದ ಭರ್ಜರಿಯಾಗಿ ವ್ಯಾಪಾರ ಆಗುತ್ತಿದೆ. ರಸ್ತೆಗೊಂದರಂತೆ ಅಲ್ಲಲ್ಲಿ ಎಳನೀರು ಮಾರಾಟವನ್ನು ಕಾಣಬಹುದು. ಈಗ ಹತ್ತಾರು ಕಡೆ ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ರಾಶಿ, ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿವೆ. ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿದೆ. ವಿವಿಧ ಹಣ್ಣಿನ ಜ್ಯೂಸ್ಗಳಿಗೂ ಬೇಡಿಕೆ ಹೆಚ್ಚಿದೆ.

ಕಳೆದ ವಾರದಿಂದ ತಾಲ್ಲೂಕಿನಲ್ಲಿ ಬಿಸಿಲಿನ ತಾಪಮಾನ ವಿಪರೀತ ಏರಿಕೆ ಕಾಣುತ್ತಿದೆ. ನಿತ್ಯವೂ ಗ್ರಾಮೀಣ ಪ್ರದೇಶದಿಂದ ಸರ್ಕಾರಿ ಕೆಲಸ ಕಾರ್ಯಗಳಿಗೆ ಜನ ಬರುತ್ತಿದ್ದು, ತಾಲ್ಲೂಕು ಆಡಳಿತ ಜನತೆಯ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಸಿಲು ಅಂತ ಮನೆಯಲ್ಲಿ ಕುಳಿತರೆ ಮನೆ ನಡೆಸಲು ಸಾಧ್ಯವಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ದುಡಿಮೆ ಅನಿವಾರ್ಯವಾದ್ದರಿಂದ ಬೇಸಿಗೆ ತಾಪದಲ್ಲೂ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯ. ಕೆಲಸದ ವೇಳೆ ಬಿಸಿಲು ತಪ್ಪಿಸಿಕೊಳ್ಳಲು ದಿನನಿತ್ಯ ಒಂದೊಂದು ರೀತಿಯ ಕಸರತ್ತು ಮಾಡುತ್ತೇವೆ
ಫಕೀರೇಶ, ಕೂಲಿ ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.