ಶಿರಹಟ್ಟಿ: ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಮಾಡದೇ ಬೆದರಿಕೆ ಹಾಕಿ, ಅಕ್ರಮ ಹಣದ ಬೇಡಿಕೆ ಇಟ್ಟು ಕೆಲಸ ವಿಳಂಬ ಮಾಡಿದರೆ, ಜನರು ಮುಲಾಜಿ ಲ್ಲದೇ ಲೋಕಾಯುಕ್ತ ದಲ್ಲಿ ದೂರ ಸಲ್ಲಿಸಬಹುದು ಎಂದು ಲೋಕಾಯುಕ್ತ ಡಿಎಸ್ಪಿ ವಿಜಯ ಕುಮಾರ ಬಿರಾದಾರ ಹೇಳಿದರು.

ಸ್ಥಳೀಯ ತಹಶೀಲ್ದಾರ್ ಕಾರ್ಯಾ ಲಯದ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಗದಗ ಜಿಲ್ಲೆಯಿಂದ ಏರ್ಪಡಿಸಿದ್ದ ಶಿರಹಟ್ಟಿ ತಾಲ್ಲೂಕು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವ ಜನಿಕರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಇವತ್ತಿನವರೆಗೂ ಯಾರೊಬ್ಬ ಅಧಿಕಾರಿಗಳು ಸಹ ನಮ್ಮ ಬಳಿ ಬಂದು ದೂರು ನೀಡಿಲ್ಲ. ಇದು ನಿಮ್ಮ ರಕ್ಷಣೆಗಾಗಿಯೇ ಇದ್ದು, ನಿಮಗೆ ಯಾರಿಂದಲಾದರೂ ಹಣ ನೀಡುವಂತೆ ಸತಾಯಿಸದರೆ ತಕ್ಷಣ ದೂರು ನೀಡಿ ಎಂದು ಸೂಚನೆ ನೀಡಿದರು.

ಪಟ್ಟಣದ ನಿವಾಸಿ ಐ.ಡಿ.ಲಕ್ಕುಂಡಿಮಠ ಅವರು ಪಟ್ಟಣದ ಏಳುಕೋಟಿ ನಗರದಲ್ಲಿ ನಿರ್ಮಾಣವಾದ ಹೊಸ ಬಡಾವಣೆಗಳಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಇದ್ದರೂ ಅಧಿಕಾರಿಗಳು ಉತಾರ ನೀಡಿದ್ದಾರೆ. ಬಡಾವಣೆ ನಿರ್ಮಾಣ ಕೈಗೆತ್ತಿಕೊಂಡ ಮಾಲೀಕರಿಗೆ ನೋಟೀಸ್ ಕೊಡಿಸಿ ಸರ್ಕಾರದ ನಿಯಮಾನುಸಾರ ಸೌಲಭ್ಯ ಕಲ್ಪಿಸಿ ಕೊಡುವಂತೆ ಅರ್ಜಿ ಸಲ್ಲಿಸಿ ಒತ್ತಾಯಿಸಿದರು.

ಇದೇ ಬಡಾವಣೆಯಲ್ಲಿ ಅಗ್ನಿ ಶಾಮಕ ಇಲಾಖೆಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಗ್ನಿಶಾಮಕ ವಾಹನ ಸಂಚರಿಸಲು ಸೂಕ್ತ ರಸ್ತೆ ನಿರ್ಮಾಣ ಕೂಡ ಮಾಡದೇ ಇರುವುದರಿಂದ ಇದುವರೆಗೆ ಕಚೇರಿ ಸಹ ಸ್ಥಳಾಂತರಿಸಿಲ್ಲ. ಅಲ್ಲದೇ ನೂತನ ಕಟ್ಟಡದ ಕಾಮಗಾರಿಯು ಕಳಪೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಪಟ್ಟಣ ಪಂಚಾಯ್ತಿ ಇಲಾಖೆ ಸಿಬಂದಿ ನಮ್ಮ ವ್ಯಾಪ್ತಿಗೆ ಬರುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ರೇಣವ್ವ ತಳವಾರ ಎಂಬ ವೃದ್ದೆ ಪಡಿತರ ಚೀಟಿಗಾಗಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿದರು. ತಾಲೂಕಿನ ಮಜ್ಜೂರ ಗ್ರಾಮದ ವಿಜಯಕುಮಾರ ಮರಿತಮ್ಮಪ್ಪ ಎಂಬುವವರು ತಮ್ಮ ತಾಯಿ ಹೆಸರಿನಲ್ಲಿದ್ದ ಜಮೀನನ್ನು ಮೋಸದಿಂದ ಬೇರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದರು. ಶಂಕ್ರಪ್ಪ ಫಕ್ಕೀರಪ್ಪ ಕಲ್ಲಣ್ಣವರ ಇವರು ಪಟ್ಟಾ ಪ್ರಕಾರ ಆಸ್ತಿ ನೋಂದಣಿ ಮಾಡಿಸಿಕೊಡುವಂತೆ ಅರ್ಜಿ ಸಲ್ಲಿಸಿದರು. ತಾಲ್ಲೂಕುಪಂಚಾಯ್ತಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರಕ್ಕೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳು ಮತ್ತು ಪಂಚಾಯತ ರಾಜ್ಯ ಇಂಜನೀಯರಿAಗ್ ಉಪ ವಿಭಾಗ ಶಿರಹಟ್ಟಿಯ ಕಚೇರಿಯಲ್ಲಿ ಭ್ರಷ್ಟಾಚಾರ ಗಳು ನಡೆದಿದ್ದು, ಈ ಕುರಿತು ತನಿಖೆ ಮಾಡುವಂತೆ ತಾಪಂ ಕೆಡಿಪಿ ಸದಸ್ಯ ಫಕ್ಕೀರೇಶ ನಡುವನಕೇರಿ ಅರ್ಜಿ ಸಲ್ಲಿಸಿದರು.

ತಹಶೀಲ್ದಾರ ಕೆ. ರಾಘವೇಂದ್ರ ರಾವ್, ತಾ.ಪಂ. ಇಒ ರಾಮಪ್ಪ ದೊಡ್ಡಮನಿ, ಪಿಎಸ್ಐ ಈರಪ್ಪ ರಿತ್ತಿ, ಅರಣ್ಯ ಇಲಾಖೆ ರಾಮಪ್ಪ ಪೂಜಾರ, ರಂಗಪ್ಪ ಕಾಂಬ್ಳೆ, ಮೃತ್ತುಂಜಯ ಗುಡ್ಡದಾನವೇರಿ, ಸುಭಾಸ ದೈಗೊಂಡ, ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ ಕಾಶಪ್ಪನವರ, ವಿ.ಎ.ಮುಳಗುಂದಮಠ, ಗೋಪಾಲ ಲಮಾಣಿ, ಮಲ್ಲಿಕಾರ್ಜುನ ಪಾಟೀಲ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-23-1658116398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.